September 20, 2026
Sunday, September 20, 2026
spot_img

ದೆಹಲಿಯಲ್ಲಿ ನೀರು ತುಂಬಿದ ರಸ್ತೆಯನ್ನೇ ಸ್ವಿಮ್ಮಿಂಗ್‌ ಪೂಲ್‌ ಮಾಡಿಕೊಂಡ ಮಕ್ಕಳು, ವಿಡಿಯೋ ವೈರಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮನೆಯಿಂದ ಹೊರಗೆ ಕಾಲಿಡದಂತಹ ಪರಿಸ್ಥಿತಿ ಉಂಟಾಗಿದ್ದು, ಜನ ಹೈರಾಣಾಗಿದ್ದಾರೆ.

ಭಾರೀ ಮಳೆ ಸುರಿಯುತ್ತಿರುವ ಕಾರಣ ದೆಹಲಿ ಮುಖ್ಯ ಪ್ರದೇಶದ ರಸ್ತೆಗಳು ಸ್ವಿಮ್ಮಿಂಗ್‌ ಪೂಲ್‌ನಂತೆ ಬದಲಾಗಿದೆ. ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಕ್ಲೋರಿನ್‌ ವಾಟರ್‌ ಇದ್ದರೆ ರಸ್ತೆಯಲ್ಲಿ ಚರಂಡಿ ಹಾಗೂ ಮಳೆ ನೀರು ಮಿಕ್ಸ್‌ ಆಗಿದೆ. ಈ ನೀರಿನಲ್ಲಿಯೇ ಮಕ್ಕಳು ಸ್ವಿಮ್ಮಿಂಗ್‌ ಮಾಡಿರುವುದು ಕಂಡುಬಂದಿದೆ.

ಮಳೆಗಾಲದಲ್ಲಿ ನೂರಾರು ರೋಗಗಳು ಹರಡುತ್ತವೆ. ಅದರಲ್ಲಿಯೂ ಮಕ್ಕಳು ಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಆದರೆ ಈ ಗಲೀಜು ನೀರಿನಲ್ಲಿ ಮಕ್ಕಳು ಆನಂದವಾಗಿ ಸ್ವಿಮ್ಮಿಂಗ್‌ ಮಾಡಿದ್ದು, ವಿಡಿಯೋ ವೈರಲ್‌ ಆಗಿದೆ. ಮಕ್ಕಳಿಗೆ ಪೋಷಕರು ಏನೂ ಹೇಳೋದಿಲ್ವಾ? ಹೊರಗೆ ಹೋಗೋದು ಡೇಂಜರ್‌ ಎಂದು ಜನ ಕಮೆಂಟ್‌ ಮಾಡಿದ್ದಾರೆ.

ಇನ್ನು ದೆಹಲಿಯಲ್ಲಿ ತೀವ್ರ ಮಳೆಯಾಗುತ್ತಿರುವ ಕಾರಣ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿದ್ದ ಮೂರು ವಿಮಾನಗಳನ್ನು ಪರ್ಯಾಯ ನಗರಗಳಿಗೆ ಕಳುಹಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !