ಮಕ್ಕಳ ಮನಸ್ಸು ಅತೀ ಸೂಕ್ಷ್ಮ, ಅಪ್ಪ-ಅಮ್ಮನ ಡಿವೋರ್ಸ್‌ನಿಂದ ಮನನೊಂದು ಮಗ ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಹಮದಾಬಾದ್‌ನಲ್ಲಿ ತಂದೆ-ತಾಯಿಯ ಡಿವೋರ್ಸ್, ನಂತರ ತಾಯಿಯ ಮರುಮದುವೆ ಇದೆಲ್ಲದರಿಂದ ಮನನೊಂದು ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬಾಲಕನ ಪೋಷಕರು ಬೇರೆಯಾಗಿ ಐದು ವರ್ಷ ಕಳೆದಿತ್ತು. ಇಬ್ಬರೂ ಬೇರೆಯಾದರೂ ಮಕ್ಕಳಿಗೆ ಸಮಯ ನೀಡಲು ಹಿಂಜರಿಯುತ್ತಿರಲಿಲ್ಲ. ಆದರೂ ಅಪ್ಪ ಅಮ್ಮ ಒಟ್ಟಿಗೇ ಇಲ್ಲ ಎನ್ನುವ ವಿಚಾರ ಬಾಲಕನನ್ನು ಕಾಡಿತ್ತು. ಆತ ಓದಿನಲ್ಲೂ ಹಿಂದಿದ್ದ. ಡಿವೋರ್ಸ್ ಆದ ಕೆಲ ಸಮಯದ ನಂತರ ಬಾಲಕನ ತಾಯಿ ಇನ್ನೊಂದು ಮದುವೆಯಾಗಿದ್ದರು. ವಾರಕ್ಕೊಮ್ಮೆಯಾದರೂ ಮನೆಗೆ ಬಂದು ಹೋಗುತ್ತಿದ್ದ ತಂದೆ ಮಕ್ಕಳನ್ನು ನೋಡೋದಕ್ಕೆ ಬರುವುದೂ ಕಡಿಮೆಯಾಗಿತ್ತು.

ತಾಯಿಯ ಮನೆಯ ಪಕ್ಕದಲ್ಲೇ ತಾಯಿಯ ತಂಗಿ ಮನೆಯಿದ್ದು ಆತ ಹೆಚ್ಚು ಸಮಯವನ್ನು ಚಿಕ್ಕಮ್ಮನ ಮನೆಯಲ್ಲಿಯೇ ಕಳೆಯುತ್ತಿದ್ದ. ಏರಿಯಾದ ಮಕ್ಕಳ ಜತೆ ಸಂಜೆ ಆಡಲು ಹೋದ ಬಾಲಕ ಮನೆಗೆ ಬಂದಾಗ ಸಪ್ಪೆಯಾಗಿದ್ದ. ಏನೂ ಮಾತನಾಡದೆ ರೂಮ್ ಬಾಗಿಲು ಹಾಕಿಕೊಂಡಿದ್ದಾನೆ. ಎಷ್ಟು ಹೊತ್ತಾದರೂ ಅಕ್ಕನ ಮಗ ರೂಮ್‌ನಿಂದ ಹೊರಬರದ ಕಾರಣ ಚಿಕ್ಕಮ್ಮ ನೋಡಿದಾಗ ಆತ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ.

ತಕ್ಷಣವೇ ವೈದ್ಯರ ಬಳಿ ಕರೆದುಕೊಂಡು ಹೋದರೂ ಪ್ರಯೋಜನವಾಗಿಲ್ಲ. ಆಟವಾಡುವಾಗ ಸ್ನೇಹಿತರು ಮನಸ್ಸಿಗೆ ನೋವು ಮಾಡಿರುವ ಸಾಧ್ಯತೆಯೂ ಇದೆ. ಆತ ಆರು ವರ್ಷದಿಂದಲೂ ಮಂಕಾಗಿದ್ದು, ಒಂಟಿತನ, ಖಿನ್ನತೆ ಕಾಡುತ್ತಿತ್ತು ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!