ಚಳಿಗೆ ಫ್ರೀಜ್ ಆದ ನೂಡಲ್ಸ್: ಫೋಟೊ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯೂ ಹ್ಯಾಂಪ್‌ಶೈರ್‌ನ ಮೌಂಟ್ ವಾಷಿಂಗ್ಟನ್‌ನಲ್ಲಿ – 34 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಚಳಿಗೆ ಈ ಪ್ರದೇಶದಲ್ಲಿ ಜನರು ವಾಸಿಸುವುದು ಅಸಾಧ್ಯವೇ ಆಗಿದೆ. ಇಷ್ಟು ಕಡಿಮೆ ತಾಪಮಾನದಲ್ಲಿ ಆಹಾರ ಪದಾರ್ಥಗಳೆಲ್ಲವೂ ಇಟ್ಟ ಜಾಗದಲ್ಲೇ ಫ್ರೀಜ್ ಆಗಿ ಹೋಗುತ್ತಿವೆ.
ಇದೇ ರೀತಿ ಫ್ರೀಜ್ ಆಗಿರುವ ನೂಡಲ್ಸ್ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫೋರ್ಕ್‌ಗೆ ಸಿಲುಕಿರುವ ನೂಡಲ್ಸ್ ಸಂಪೂರ್ಣವಾಗಿ ಗಟ್ಟಿಯಾಗಿದೆ. ಯಾವುದೇ ಸಹಾಯ ಇಲ್ಲದೆ ಫೋರ್ಕ್ ಕೂಡ ಹಾಗೇ ನಿಂತಿದೆ. ಮೌಂಟ್ ವಾಷಿಂಗ್ಟನ್ ಅಬ್ಸರ್‌ವೇಟರಿ ಎನ್ನುವ ಖಾಸಗಿ ವೈಜ್ಞಾನಿಕ ಮತ್ತು ಶಿಕ್ಷಣ ಸಂಸ್ಥೆ ಈ ಫೋಟೊ ಹಂಚಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!