ಹೊಸದಿಗಂತ ಡಿಜಿಟಲ್ ಡೆಸ್ಕ್:
ಜ.23, ನೇತಾಜಿ ಸುಭಾಷ್ ಚಂದ್ರ ಬೋಸರ ಜನ್ಮ ದಿನದಿಂದ ಗಣರಾಜ್ಯೋತ್ಸವದ ಆಚರಣೆಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಗಣರಾಜ್ಯೋತ್ಸವದ ಆಚರಣೆಯಲ್ಲಿ ಸುಭಾಷ್ ಚಂದ್ರ ಬೋಸ್ ಜಯಂತಿ ಸೇರಿಸಲು ಜ.24 ಬದಲಿಗೆ ಜ.23ರಿಂದ ಗಣರಾಜ್ಯೋತ್ಸವದ ಆಚರಣೆ ಆರಂಭವಾಗಲಿದೆ.
ನೇತಾಜಿ ಜನ್ಮ ದಿನವನ್ನು ಪರಾಕ್ರಮ್ ದಿವಸ್ ಎಂದು ಆಚರಿಸಲಾಗುತ್ತಿದೆ. ಭಾರತೀಯ ಸಂಸ್ಕೃತಿ ಹಾಗೂ ಇತಿಹಾಸ ಸೇರಿದಂತೆ ಇತರೆ ಪ್ರಮುಖ ಅಂಶಗಳನ್ನು ಸ್ಮರಿಸುವಲ್ಲಿ ಪ್ರಧಾನಿ ಮೋದಿ ಗಮನ ಹರಿಸಿದ್ದಾರೆ.
ಆ.14ಕ್ಕೆ ವಿಭಜನೆಯ ಕರಾಳ ದಿನ: ದೇಶ ವಿಭಜನೆಗೊಂಡ ದಿನವನ್ನು ನೆನಪಿಸಿಕೊಳ್ಳಲಾಗುತ್ತದೆ.
ಅ.31 ಏಕತಾ ದಿವಸ್: ಸರ್ದಾರ್ ವಲ್ಲಭಬಾಯಿ ಪಟೇಲರ ಜನ್ಮದಿನದ ಅಂಗವಾಗಿ ಅಂದು ದೇಶದೆಲ್ಲೆಡೆ ಏಕತಾ ದಿನದ ಆಚರಣೆ ನಡೆಸಲಾಗುತ್ತದೆ.
ನ.15 ಜಂಜಾಟಿಯ ಗೌರವ್ ದಿವಸ್: ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಡಾ ಅವರ ಜನ್ಮದಿನದ ಅಂಗವಾಗಿ ಈ ದಿನ ಆಚರಿಸಲಾಗುತ್ತದೆ.
ನ.26: ಸಂವಿಧಾನ ದಿನ: ಅಂದು 1949ರಲ್ಲಿ ಸಂವಿಧಾನ ಅಂಗೀಕರಿಸಲಾಗಿತ್ತು.
ಡಿ.26: ವೀರ ಬಾಲ ದಿವಸ್: ತಮ್ಮ ಜೀವನ ತ್ಯಾಗ ಮಾಡಿದ 10ನೇ ಸಿಖ್ ಗುರು ಗೋಬಿಂದ್ ಸಿಂಗ್ ರ ಮಕ್ಕಳು ಸಾಹಿಬ್ಜಾದಾ ಫತೇಸಿಂಗ್ ಹಾಗೂ ಸಾಹಿಬ್ಜಾದಾ ಝೋರಾವಾರ್ ಸಿಂಗ್ ಅವರ ಗೌರವಾರ್ಥವಾಗಿ ಆಚರಿಸಲಾಗುತ್ತದೆ.