ʻಲಾಕ್‌ಡೌನ್‌ʼ ಪದ ಬಳಸದಂತೆ ಮಾಧ್ಯಮಗಳಿಗೆ ಚೀನಾ ಸರ್ಕಾರ ನಿಷೇಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಲಾಕ್‌ಡೌನ್ ಪದದ ಮೇಲೆ ಚೀನಾ ಸರ್ಕಾರ ನಿಷೇಧ ಹೇರಿದೆ. ಈ ಸಂದರ್ಭದಲ್ಲಿ ಸ್ಥಳೀಯ ಮಾಧ್ಯಮಗಳಿಗೆ ಸರ್ಕಾರ ಪ್ರಮುಖ ನಿರ್ದೇಶನಗಳನ್ನು ನೀಡಿದ್ದು,  ಇನ್ನು ಮುಂದೆ ಲಾಕ್‌ಡೌನ್ ಎಂಬ ಪದವನ್ನು ಬಳಸುವಂತಿಲ್ಲ ಎಂದು ತಾಕೀತು ಮಾಡಿದೆ.

ಶಾಂಘೈ ನಗರದಲ್ಲಿ ಝೀರೋ ಕೋವಿಡ್‌ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ ನಂತರ, ಇದೀಗ ನಿರ್ಬಂಧಗಳನ್ನು ಸಡಿಲಿಸಿದೆ.  2 ತಿಂಗಳ ನಂತರ ಮನೆಯಿಂದ ಹೊರಬಂದ ಜನ, ಶಾಂಘೈನ ಬೀದಿಗಳಲ್ಲಿ ಸಂತೋಷದಿಂದ ವಿಹರಿಸುತ್ತಾ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.

ಶಾಂಘೈನಲ್ಲಿ ಲಾಕ್‌ಡೌನ್ ಮುಗಿದಿದೆ ಎಂದು ಮಾಧ್ಯಮಗಳು ವರದಿಗಳು ಮಾಡುತ್ತಿದ್ದಂತೆ ಈ ಬಗ್ಗೆ ಚೀನಾ ಸರ್ಕಾರ ಗಂಭೀರವಾಗಿದೆ. ಇನ್ನು ಮುಂದೆ ಲಾಕ್ ಡೌನ್ ಪದ ಬಳಸದಂತೆ ಮಾಧ್ಯಮಗಳಿಗೆ ಸೂಚನೆ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!