Friday, March 31, 2023

Latest Posts

ಪಾಕ್ ಗೂಢಚಾರರಿಗೆ ಚೀನಾ ಗಡಿ ಮಾಹಿತಿ ನೀಡುತ್ತಿದ್ದ ಯೋಧನ ಬಂಧನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಚೀನಾ -ಭಾರತಕ್ಕೆ ಸೇರಿದ ಉತ್ತರ ಗಡಿಯಲ್ಲಿ ನಿಯೋಜಿಸಲಾಗಿದ್ದ ಭಾರತದ ಯೋಧನೊಬ್ಬ ಅಲ್ಲಿನ ಸೇನಾ ಚಟುವಟಿಕೆಗಳ ರಹಸ್ಯ ಮಾಹಿತಿಯನ್ನು 15 ಸಾವಿರ ರೂ.ಗಳಿಗೆ ಪಾಕಿಸ್ತಾನದ ರಾಯಭಾರಿ ಕಚೇರಿಯ ಐಎಸ್‌ಐ ಏಜೆಂಟ್‌ಗೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ದೆಹಲಿಯಲ್ಲಿರುವ ಪಾಕಿಸ್ತಾನಿ ರಾಯಭಾರಿ ಕಚೇರಿಯಲ್ಲಿ ನಿಯೋಜನೆಗೊಂಡಿರುವ ಪಾಕಿಸ್ತಾನಿ ಪ್ರಜೆ ಅಬಿದ್ ಹುಸೇನ್ ಅಲಿಯಾಸ್ ನಾಯಕ್ ಅಬೀದ್ ಎಂಬಾತನಿಗೆ ಈ ಯೋಧ ಕೇವಲ 15 ಸಾವಿರ ರೂ.ಗಳಿಗೆ ಸೇನಾ ನೆಲೆಯ ರಹಸ್ಯ ಮಾಹಿತಿ ರವಾನೆ ಮಾಡುತ್ತಿದ್ದ. ಈ ವೇಳೆ ಆತ ಸಿಕ್ಕಿ ಬಿದ್ದಿದ್ದು, ಬಂಧನಕ್ಕೊಳಗಾಗಿದ್ದಾನೆ. ಸೇನಾ ನಿಯಮಗಳನುಸಾರ ಆತನ ವಿರುದ್ದ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!