ಚೀನಾದಲ್ಲಿ ಮತ್ತೆ ಕೊರೋನಾ ಅಬ್ಬರ; ಆಹಾರ, ಔಷಧಗಳು ಸಿಗದೆ ಜನರ ಹಾಹಾಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಚೀನಾದಲ್ಲಿ ಕೊರೊನಾ ರೂಪಾಂತರಿ ವೈರಸ್‌ ರಣಕೇಕೆಯಿಂದಾಗಿ ಅಲ್ಲಿನ ಕೆಲವು ಪ್ರದೇಶಗಳಲ್ಲಿ ಕಠಿಣ ಲಾಕ್‌ಡೌನ್‌ ಜಾರಿಯಾಗಿದೆ.
ಶಾಂಘೈ ಸುತ್ತಮುತ್ತ ಜನ ತೀವ್ರ ತತ್ತರಿಸಿ ಹೋಗಿದ್ದಾರೆ. ಕನಿಷ್ಠ ಮನೆಯಲ್ಲಿ ತಿನ್ನಲು ಆಹಾರ, ಕುಡಿಯಲು ನೀರು, ಔಷಧಿಗಳ ಕೊರತೆಯಿಂದ ಜನ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಕೊರೊನಾ ವೈರಸ್‌ನಿಂದ ಚೀನಾ ತಲ್ಲಣಗೊಂಡಿದೆ. ಕಟ್ಟಿನಿಟ್ಟಿನ ಕ್ರಮಗಳ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಟ್ಟಡ, ಬಾಲ್ಕನಿಗಳು ಮತ್ತು ಕಿಟಕಿಗಳಿಂದ ಕೂಗು, ಕಿರುಚಾಟ ಮತ್ತು ಹಾಡುಗಳನ್ನು ಹಾಡುತ್ತಾ ಸರ್ಕಾರದ ವಿರುದ್ಧ ತಮ್ಮ ಅಸಹಾಯಕತೆ ಆಕ್ರೋಶವನ್ನು ಹೊರಹಾಕಿದ್ದಾರೆ. ಹಸಿವಿನಿಂದ ನರಳುತ್ತಿದ್ದರೂ ಸರ್ಕಾರ ಕಠೋರವಾಗಿ ವರ್ತಿಸುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಶಾಂಘೈನಲ್ಲಿ ಪ್ರತಿದಿನ 20 ಸಾವಿರಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ. ಭಾನುವಾರ, ಏಪ್ರಿಲ್ 10, 2022 ರಂದು, ಒಂದೇ ದಿನದಲ್ಲಿ 25,000 ಪ್ರಕರಣಗಳು ದಾಖಲಾಗಿವೆ. ಮಾರ್ಚ್‌ ತಿಂಗಳಲ್ಲಿ 70,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.
ವೈರಸ್ ನಿಯಂತ್ರಣದ ಭಾಗವಾಗಿ ಏಪ್ರಿಲ್ 1 ರಿಂದ ಶಾಂಘೈ ನಗರದಲ್ಲಿ ಲಾಕ್‌ಡೌನ್ ವಿಧಿಸಲಾಗಿದೆ. ಹತ್ತು ದಿನಗಳ ಕಾಲ ಕಟ್ಟುನಿಟ್ಟಾದ ಲಾಕ್‌ಡೌನ್ ಅನ್ನು ಜಾರಿಗೊಳಿಸಿದ್ದಾರೆ. ಇದರಿಂದಾಗಿ ಅಗತ್ಯ ವಸ್ತುಗಳ ಕೊರತೆ, ವಯೋವೃದ್ಧರಿಗೆ ಔಷಧೋಪಚಾರ, ಆಹಾರವೂ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಟ್ಟಡಗಳ ಕಿಟಕಿಗಳು, ಬಾಲ್ಕನಿಗಳ ಬಳಿ ಬಂದು ಜೋರಾಗಿ ಕೂಗುತ್ತಾ ಪ್ರತಿಭಟನೆ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!