ವೈರಸ್ ಉಗಮಸ್ಥಾನ ಚೀನಾದಲ್ಲಿ ಹೆಚ್ಚುತ್ತಲೇ ಇವೆ ಕೋವಿಡ್ ಪ್ರಕರಣಗಳು

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಯುರೋಪಿನ ರಾಷ್ಟ್ರಗಳೂ ಸೇರಿದಂತೆ ಬಹುತೇಕ ಜಗತ್ತು ಕೋವಿಡ್ ಅಲೆಗಳ ಜತೆ ಬದುಕುವುದನ್ನು ರೂಢಿಸಿಕೊಂಡಂತೆ ಕಾಣಿಸುತ್ತಿದೆ. ಕೋವಿಡ್ ಅಧಿಕೃತವಾಗಿ ಮುಗಿದಿದೆ ಎನ್ನಲಾಗದಿದ್ದರೂ ಅದರ ನಿರಂತರ ಭಯ-ಆತಂಕಗಳಿಂದ ಜಗತ್ತು ಹೊರಬಂದಿದೆ ಎಂದೇ ಹೇಳಬಹುದು.

ಆದರೆ ವೈರಸ್ ಉಗಮಸ್ಥಾನ ಚೀನಾದಲ್ಲಿ ಮಾತ್ರ ಆತಂಕರಹಿತ ವಾತಾವರಣವಿಲ್ಲ. ಏಕೆಂದರೆ ಶಾಂಘೈ ನಗರವನ್ನು ಸಂಪೂರ್ಣ ಲಾಕ್ಡೌನ್ ಮಾಡಲಾಗಿದೆ. ಮಾರ್ಚ್ ತಿಂಗಳಿನಲ್ಲಿ ಚೀನಾದಲ್ಲಿ 70,000 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಪ್ರಾರಂಭದಲ್ಲಿ ನೋಡಿದ ಸಾವಿನ ಸುದ್ದಿಗಳು ಅಷ್ಟಾಗಿ ಇಲ್ಲದಿದ್ದರೂ ರೋಗ ಹರಡುವಿಕೆಯಂತೂ ಅಲ್ಲಿ ಮುಂದುವರಿದಿದೆ.

ಎರಡು ಕೋಟಿಯಷ್ಟು ಜನ ವಾಸಿಸುತ್ತಿರುವ ಶಾಂಘೈ, ಚೀನಾದ ಉದ್ಯಮ ರಾಜಧಾನಿ ಅಂತಲೇ ಕರೆಸಿಕೊಳ್ಳುತ್ತದೆ. ಅದರ ಪಶ್ಚಿಮ ಭಾಗದಲ್ಲೀಗ ಬಹಳ ಕಟ್ಟುನಿಟ್ಟಾದ ಲಾಕ್ಡೌನ್ ನಿಯಮಗಳನ್ನು ಹೇರಲಾಗಿದೆ. ಚೀನಾ ಜೀರೊ ಕೋವಿಡ್ ನೀತಿಯನ್ನು ಅನುಸರಿಸುತ್ತಿದೆ. ಅಂದರೆ, ಒಂದೇ ಒಂದು ಪ್ರಕರಣ ದಾಖಲಾದರೂ ಅದರ ಹರಡುವಿಕೆ ತಡೆಯುವುದಕ್ಕೆ ಅತಿ ಉಗ್ರ ಕ್ರಮಗಳನ್ನು ಕೈಗೊಳ್ಳುವುದು ಅದರ ನಿಲುವು. ಹೀಗಿರುವಾಗ ಮಾರ್ಚ್ 29ರ ಹೊತ್ತಿಗೆ ಶಾಂಘೈನಲ್ಲಿ 5 ಸಾವಿರಕ್ಕಿಂತ ಹೆಚ್ಚು ಸಕ್ರಿಯ ಕೋವಿಡ್ ಪ್ರಕರಣಗಳಿರುವುದು ಚೀನಾದ ಲಾಕ್ಡೌನ್ ಕ್ರಮಕ್ಕೆ ಕಾರಣವಾಗಿದೆ.

ಆದರೆ, ಈ ಲಾಕ್ಡೌನ್ ಕ್ರಮಗಳ ಬಗ್ಗೆ ಸ್ಥಳೀಯರಲ್ಲಿ ಭಾರಿ ಹತಾಶೆ ಮತ್ತು ಆಕ್ರೋಶಗಳು ಬೆಳೆಯುತ್ತಿವೆ ಎಂದು ಮಾಧ್ಯಮ ವರದಿಗಳು ಸಾರುತ್ತಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!