ಕೋವಿಡ್‌ ಪರಿಸ್ಥಿತಿ ಬಗ್ಗೆ ಟೀಕಿಸುವ ಸಾವಿರಕ್ಕೂ ಹೆಚ್ಚು ಸೋಷಿಯಲ್‌ ಮೀಡಿಯಾ ಅಕೌಂಟ್‌ ಬ್ಯಾನ್‌ ಮಾಡಿದ ಚೀನಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಚೀನಾದ ಕೋವಿಡ್‌ ಪರಿಸ್ಥಿತಿಗಳ ಬಗ್ಗೆ ಹಾಗು ಚೀನಾ ಸರ್ಕಾರದ ಕೋವಿಡ್‌ ನೀತಿಗಳ ಬಗ್ಗೆ ಟೀಕಿಸುವವರ ವಿರುದ್ಧ ಚೀನಾ ಸರ್ಕಾರ ರೊಚ್ಚಿಗೆದ್ದಿದ್ದು 1,120ಕ್ಕೂ ಅಧಿಕ ಟೀಕಾಕಾರರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿಷೇಧಿಸಿದೆ. ಚೀನಾದ ಜನಪ್ರಿಯ ಸಿನಾ ವೈಬೊ ಸಾಮಾಜಿಕ ಮಾಧ್ಯಮ ವೇದಿಕೆಯು 12,854 ಉಲ್ಲಂಘನೆಗಳ ವಿರುದ್ಧ ಕ್ರಮ ಕೈಗೊಂಡಿದ್ದು1,120 ಖಾತೆಗಳ ಮೇಲೆ ತಾತ್ಕಾಲಿಕ ಅಥವಾ ಶಾಶ್ವತ ನಿಷೇಧವನ್ನು ಹೊರಡಿಸಿದೆ ಎಂದು ಮೂಲಗಳ ವರದಿ ತಿಳಿಸಿದೆ.

ಕಠಿಣ ಲಾಕ್‌ಡೌನ್‌ಗಳು, ಕ್ವಾರಂಟೈನ್ ಕ್ರಮಗಳು ಮತ್ತು ಸಾಮೂಹಿಕ ಪರೀಕ್ಷೆಗಳನ್ನು ಒಳಗೊಂಡಿರುವ ತನ್ನ ಕಠಿಣ ‘ಶೂನ್ಯ-ಕೋವಿಡ್’ ನೀತಿಯನ್ನು ಚೀನಾ ಹಠಾತ್ತನೆ ಕೈಬಿಟ್ಟಿತು. ನಿಯಮಗಳ ಬದಲಾವಣೆಯ ನಂತರ, ಚೀನಾವು ಸೋಂಕಿನ ಉಲ್ಬಣಕ್ಕೆ ಸಾಕ್ಷಿಯಾಯಿತು. ಪರಿಣಾಮ ವೈದ್ಯಕೀಯ ಸೌಲಭ್ಯಗಳು ಸೇರಿದಂತೆ ಇತರ ಅಗತ್ಯ ವಸ್ತುಗಳ ಕೊರತೆ ಉಂಟಾಗಿದೆ.

ಕಂಪನಿಯು “ಎಲ್ಲಾ ರೀತಿಯ ಕಾನೂನುಬಾಹಿರ ವಿಷಯಗಳ ತನಿಖೆ ಮತ್ತು ಹೆಚ್ಚಿನ ಬಳಕೆದಾರರಿಗೆ ಸಾಮರಸ್ಯ ಮತ್ತು ಸ್ನೇಹಪರ ಸಮುದಾಯ ವಾತಾವರಣವನ್ನು ಸೃಷ್ಟಿಸಲು ಅಗತ್ಯ ಕ್ರಮ ಕೈಗೊಳ್ಳುತ್ತದೆ” ಎಂದು ಸಿನಾ ವೈಬೊ ಹೇಳಿಕೆಯಲ್ಲಿ ತಿಳಿಸಲಾಗಿದೆ. ಚೀನಾ ಕಡ್ಡಾಯವಾದ ಕ್ವಾರಂಟೈನ್‌ಗಳನ್ನು ಕೊನೆಗೊಳಿಸಲು ಯೋಜಿಸುತ್ತಿರುವುದರಿಂದ ಈ ಬೆಳವಣಿಗೆ ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!