Tuesday, March 28, 2023

Latest Posts

ʻಅಪಾಯ ಇಲ್ಲ ಎಂದರೂ ನಾಶ ಮಾಡಿದ್ದೀರಲ್ಲಾʼ: ಸ್ಪೈ ಬಲೂನ್‌ ಹೊಡೆದುರುಳಿಸಿದ್ದಕ್ಕೆ ಚೀನಾ ಕೆಂಡಾಮಂಡಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಮೆರಿಕದ ವಾಯುಪ್ರದೇಶದಲ್ಲಿ ಹಾರಾಡುತ್ತಿದ್ದ ಚೀನಾದ ಬೇಹುಗಾರಿಕಾ ಬಲೂನ್ ಅನ್ನು ಅಟ್ಲಾಂಟಿಕ್ ಸಾಗರದ ಮೇಲ್ಮೈಗೆ ತಂದು ಯುದ್ಧ ವಿಮಾನಗಳ ಸಹಾಯದಿಂದ ಸ್ಫೋಟಿಸಿದ್ದಕ್ಕೆ ಚೀನಾ ಕೆಂಡಾಮಂಡಲವಾಗಿದೆ. ಆ ಬಲೂನ್‌ನಿಂದ ಯಾವುದೇ ಅಪಾಯವಿಲ್ಲ ಎಂದು ಹೇಳಿದರೂ ಅದನ್ನು ಹೊಡೆದುರುಳಿಸಿದೀರಲ್ಲಾ? ಎಂದು ಪ್ರಶ್ನಿಸಿದೆ.

ಈ ಕುರಿತು ಅಮೆರಿಕಕ್ಕೆ ಪ್ರಬಲ ಎಚ್ಚರಿಕೆಯನ್ನೂ ನೀಡಲಾಗಿತ್ತು. ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ಈ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸುವಂತೆ ಅಮೆರಿಕವನ್ನು ಕೇಳಿಕೊಂಡರೂ, ಮಾತುಗಳನ್ನು ಲೆಕ್ಕಿಸದೆ ಪತ್ತೇದಾರಿ ಬಲೂನ್ ಅನ್ನು ಹೊಡೆದುರುಳಿಸುವುದು ಸರಿಯಾದ ನಿರ್ಧಾರವಲ್ಲ ಎಂದು ಚೀನಾ ಹೇಳಿದೆ. ಈ ಮೂಲಕ ಅಮೆರಿಕ ಅಂತಾರಾಷ್ಟ್ರೀಯ ಮಾನದಂಡಗಳನ್ನು ಉಲ್ಲಂಘಿಸಿದೆ ಎಂದು ಪ್ರತಿಭಟನೆ ನಡೆಸುವುದಾಗಿ ಚೀನಾ ತಿಳಿಸಿದೆ.

ಅಮೆರಿಕದ ವಾಯುಪ್ರದೇಶದಲ್ಲಿ ಪತ್ತೇದಾರಿ ಬಲೂನ್ ಪತ್ತೆಯಾದ ಕೆಲವೇ ಗಂಟೆಗಳಲ್ಲಿ ಅದು ಚೀನಾದ ಬಲೂನ್ ಆಗಿದ್ದು, ಇದರಿಂದ ಯಾವುದೇ ಅಪಾಯವಿಲ್ಲ ಎಂದು ಅಮೆರಿಕಕ್ಕೆ ತಿಳಿಸಿದ್ದೇವೆ ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಜನವರಿ 28 ರಂದು, ಬಲೂನ್ ಅಲಾಸ್ಕಾ ಪ್ರವೇಶಿಸಿದೆ. ಅಲ್ಲಿಂದ ಜನವರಿ 30 ರಂದು ಕೆನಡಾದ ವಾಯುಪ್ರದೇಶವನ್ನು ಪ್ರವೇಶಿಸಿ ಜನವರಿ 31 ರಂದು ಕೆನಡಾದಿಂದ ಇಡಾಹೊ ಮೂಲಕ US ವಾಯುಪ್ರದೇಶವನ್ನು ಪುನಃ ಪ್ರವೇಶಿಸಿತು.

ಈ ಬಲೂನ್ ಹವಾಮಾನ ಸಂಶೋಧನೆಗಾಗಿ ಮತ್ತು ಬಲವಾದ ಗಾಳಿಯಿಂದಾಗಿ ಮಾರ್ಗ ಬದಲಾಯಿಸಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಚೀನಾದ ಮನವಿಯನ್ನು ಅಮೆರಿಕ ತಿರಸ್ಕರಿಸಿ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷರ ಆದೇಶದ ಮೇರೆಗೆ ಅಮೆರಿಕದ ಮಿಲಿಟರಿ ಭಾನುವಾರ ಬಲೂನ್ ಅನ್ನು ಹೊಡೆದುರುಳಿಸಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!