Tuesday, March 28, 2023

Latest Posts

VIRAL VIDEO|ಅಮಾನುಷ ಘಟನೆ: ವೃದ್ಧೆಯನ್ನು ಹಗ್ಗದಿಂದ ಕಟ್ಟಿ ಥಳಿತ

ಹೊಸದಿಗಂತ ಡಿಜಿಟಲ್ ಡೆಸ್ಕ್‌:

ವೃದ್ಧೆಯೊಬ್ಬಳನ್ನು ಹಗ್ಗದಿಂದ ಕಟ್ಟಿ ಮೂವರು ಥಳಿಸಿರುವ ಅಮಾನುಷ ಗಟನೆಯೊಂದು ಸಾಮಾಜಿಕ ಜಾಲತಾಣಗಲ್ಲಲಿ ವೈರಲ್‌ ಆಗುತ್ತಿದೆ.  ಆಕೆಯ ಜಾತಿಯನ್ನು ಉಲ್ಲೇಖಿಸಿ ಅವಮಾನಿಸಲಾಗಿದೆ ಎನ್ನಲಾಗಿದ್ದು, ಈ ಘಟನೆ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಎಫ್‌ಐಆರ್‌ನಲ್ಲಿ ಇಬ್ಬರು ಮಹಿಳೆಯರ ಜೊತೆಗೆ ಮತ್ತೊಬ್ಬ ವ್ಯಕ್ತಿಯ ಹೆಸರನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಸ್ಸಿ ಮತ್ತು ಎಸ್ಟಿ ಮೇಲಿನ ಹಲ್ಲೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹೀರಾಪುರ ಗ್ರಾಮದಲ್ಲಿ ವೃದ್ಧೆ ಒಂಟಿಯಾಗಿ ವಾಸವಿದ್ದು, ಅವರ ಮಗ ಇಂದೋರ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾನೆ. ತನ್ನ ಮನೆಯ ಪಕ್ಕದಲ್ಲೇ ವಾಸವಾಗಿರುವ ಗಣೇಶ್ ಎಂಬ ವ್ಯಕ್ತಿ ತನ್ನ ಮನೆಗೆ ಕುಡಿದು ಬಂದು ಶಾಪ ಹಾಕಿದ್ದಾನೆ ಎಂದು ವೃದ್ಧೆ ತಿಳಿಸಿದ್ದಾರೆ.

ಬಳಿಕ ಮನೆಯಿಂದ ಹೊರಗೆ ಎಳೆದೊಯ್ದು ಕಟ್ಟಿ ಹಾಕಿ ಥಳಿಸಿದ್ದಾರೆ ಎಂದು ವಿವರಿಸಿದ್ದಾಳೆ. ಗಣೇಶ್ ಈ ಹಿಂದೆಯೂ ಹಲವು ಬಾರಿ ತನಗೆ ಅವಮಾನ ಮಾಡಿದ್ದ ಎಂದು ಸಂತ್ರಸ್ತೆ ಹೇಳಿದ್ದಾರೆ. ಆಕೆಗೆ ಥಳಿಸುತ್ತಿದ್ದಾಗ ಕೆಲ ಸ್ಥಳೀಯರು ಆಕೆಯನ್ನು ರಕ್ಷಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!