ಚೀನಾ ಲೋನ್ ಆಪ್ಸ್ ಹಗರಣ: Paytm ಸಹಿತ ಸರಣಿ ಪಾವತಿ ಆಪ್‌ಗಳ 46 ಕೋಟಿ ರೂ. ಮುಟ್ಟಗೋಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಚೀನಾ ನಿಯಂತ್ರಿತ ಲೋನ್ ಆಪ್‌ಗಳು ಮತ್ತು ಹೂಡಿಕೆಗೆ ಸಂಬಂಧಿಸಿದಂತೆ ದಾಳಿ ನಡೆಸಿದ ಬಳಿಕ ಸರಣಿ ಪಾವತಿ ಆಪ್‌ಗಳಾದ Easebuzz, Razorpay, Cashfree ಮತ್ತು Paytm ನಲ್ಲಿ ಇರಿಸಲಾಗಿದ್ದ 46.67 ಕೋಟಿ ರೂ. ಮೌಲ್ಯದ ಹಣವನ್ನು ಮುಟ್ಟಗೋಲು ಹಾಕಿರುವುದಾಗಿ ಜಾರಿ ನಿರ್ದೇಶನಾಲಯ ಇಂದು ತಿಳಿಸಿದೆ.

ಮನಿ ಲಾಂಡರಿಂಗ್ ವಿರೋಧಿ ಕಾನೂನಿನ ಅಡಿಯಲ್ಲಿ ಹಣವನ್ನು ಮುಟ್ಟಗೋಲು ಹಾಕಲಾಗಿದೆ.
ಸೆಪ್ಟೆಂಬರ್ 14 ದೆಹಲಿ, ಮುಂಬೈ, ಗಾಜಿಯಾಬಾದ್, ಲಕ್ನೋ ಮತ್ತು ಗಯಾದಲ್ಲಿ ರಂದು ಶೋಧ ನಡೆಸಲಾಗಿತ್ತು.ಹದಿನಾರು ಬ್ಯಾಂಕ್‌ಗಳು ಮತ್ತು ಪಾವತಿ ಗೇಟ್‌ವೇಗಳು HPZ ಹೆಸರಿನ ಅಪ್ಲಿಕೇಶನ್ ಆಧಾರಿತ ಟೋಕನ್ ಮತ್ತು ಸಂಬಂಧಿತ ಘಟಕಗಳಿಗೆ ಸಂಬಂಧಿಸಿದ ತನಿಖೆಗೆ ಸಂಬಂಧಿಸಿವೆ ಎಂದು ಫೆಡರಲ್ ಏಜೆನ್ಸಿ ತಿಳಿಸಿದೆ.

ಮನಿ ಲಾಂಡರಿಂಗ್ ಪ್ರಕರಣವು ನಾಗಾಲ್ಯಾಂಡ್‌ನ ಕೊಹಿಮಾ ಪೊಲೀಸರ ಸೈಬರ್ ಕ್ರೈಂ ಘಟಕವು 2021 ರ ಅಕ್ಟೋಬರ್‌ನಲ್ಲಿ ದಾಖಲಿಸಿದ ಎಫ್‌ಐಆರ್‌ನಿಂದ ಪ್ರೇರಿತವಾಗಿ ಇಡಿ ಇದರ ಜಾಡು ಬೆನ್ನತ್ತಿದೆ. ಶೋಧನೆಯ ಸಮಯದಲ್ಲಿ, ವಿವಿಧ ದೋಷಾರೋಪಣೆಯ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಹೇಳಿದೆ.

ಪುಣೆಯ ಈಸ್‌ಬಜ್ ಪ್ರೈವೇಟ್ ಲಿಮಿಟೆಡ್‌ನಲ್ಲಿ 33.36 ಕೋಟಿ ರೂ., ಬೆಂಗಳೂರಿನ ರೇಜರ್‌ಪೇ ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್‌ನಲ್ಲಿ 8.21 ಕೋಟಿ ರೂ. , ಬೆಂಗಳೂರಿನ ಕ್ಯಾಶ್‌ಫ್ರೀ ಪಢಮೆಂಟ್ಸ್‌ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನಲ್ಲಿ 1.28 ಕೋಟಿ ರೂ. ಮತ್ತು ದೆಹಲಿಯ Paytm Payments Services Limitedನಲ್ಲಿ 1.11 ಕೋಟಿ ರೂ. ಪತ್ತೆಯಾಗಿದೆ ಎಂದು ಇಡಿ ಹೇಳಿದೆ.

ಇನ್ನೂ, ವಿವಿಧ ಬ್ಯಾಂಕ್ ಖಾತೆಗಳು ಮತ್ತು ವರ್ಚುವಲ್ ಖಾತೆಗಳಲ್ಲಿ 46.67 ಕೋಟಿ ಮೊತ್ತವನ್ನು ಪತ್ತೆಹಚ್ಚಲಾಗಿದೆ ಮತ್ತು ಮುಟ್ಟುಗೋಲು ಹಾಕಲಾಗಿದೆ ಎಂದು ಇಡಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!