ಪತನಗೊಂಡ ರಾಕೆಟ್ ಅವಶೇಷಗಳು ಫಿಲಿಪೈನ್ಸ್ ಬಳಿ ಬಿದ್ದಿವೆ: ನಾಸಾ ಟೀಕೆಗೆ ಚೀನಾ ಉತ್ತರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಬಾಹ್ಯಾಕಾಶ ಹೊಸದಾಗಿ ನಿರ್ಮಾಣ ಮಾಡಲಾಗುತ್ತಿರುವ ನಿಲ್ದಾಣಕ್ಕೆ ಉಡಾವಣೆ ಮಾಡಲಾಗಿದ್ದ ರಾಕೆಟ್‌ನ ಅವಶೇಷಗಳು ಫಿಲಿಪೈನ್ಸ್‌ನ ಸಮೀಪ ಬಿದ್ದಿವೆ ಎಂದು ಚೀನಾ ಸರ್ಕಾರ ಪ್ರಕಟಿಸಿದೆ.
ಲಾಂಗ್ ಮಾರ್ಚ್-5ಬಿ ರಾಕೆಟ್‌ ಭಾನುವಾರ 12:55 ರ ಸುಮಾರಿಗೆ ಪತನಗೊಂಡಿದೆ ಎಂದು ಚೀನಾ ಬಾಹ್ಯಾಕಾಶ ಸಂಸ್ಥೆ ಹೇಳಿದೆ. ಆದರೆ, ಅವಶೇಷಗಳು ಭೂಮಿಯ ಮೇಲೆ ಬಿದ್ದಿದೆಯೇ ಅಥವಾ ಸಮುದ್ರದ ಮೇಲೆ ಬಿದ್ದಿದೆಯೇ ಎಂಬುದರ ಕುರಿತು ಯಾವುದೇ ವಿವರಗಳನ್ನು ನೀಡಿಲ್ಲ.  ಆದರೆ ರಾಕೆಟ್‌ ಬಿದ್ದ ಪ್ರದೇಶ 119 ಡಿಗ್ರಿ ಪೂರ್ವ ರೇಖಾಂಶ ಮತ್ತು 9.1 ಡಿಗ್ರಿ ಉತ್ತರ ಅಕ್ಷಾಂಶದಲ್ಲಿದೆ ಎಂದು ಹೇಳಿದೆ. ಈ ಮಾಹಿತಿಯ ಪ್ರಕಾರ ನೋಡುವುದಾದರೆ ಫಿಲಿಪೈನ್ ನಗರದ ಆಗ್ನೇಯ ಭಾಗದಲ್ಲಿರುವ ಪಲಾವಾನ್ ದ್ವೀಪದ ಪೋರ್ಟೊ ಪ್ರಿನ್ಸೆಸಾ ಸಮುದ್ರ ಭಾಗದಲ್ಲಿ ರಾಕೆಟ್‌ ಬಿದ್ದಿದೆ.

ಬಾಹ್ಯಾಕಾಶ ನಿಲ್ದಾಣಕ್ಕೆ ಅಗತ್ಯ ವಸ್ತುಗಳನ್ನು ಹೊತ್ತೊಯ್ಯುತ್ತಿದ್ದ ಬಾಹ್ಯಾಕಾಶ ನೌಕೆಯ ಪತನಗೊಂಡಾಗ ಅದರ ಅವಶೇಷಗಳನ್ನು ದಕ್ಷಿಣ ಪೆಸಿಫಿಕ್‌ ಸಾಗರದ ಪೂರ್ವನಿರ್ಧರಿತ ಪ್ರದೇಶದಲ್ಲಿ ಬೀಳಿಸಲಾಗಿದೆ. ಅದರಲ್ಲಿ ಹೆಚ್ಚಿನಾಂಶವು ಮರುಪ್ರವೇಶಿಸುವಾಗ ಸುಟ್ಟುಹೋಗಿತ್ತು ಎಂದು ಚೀನಾ ಘೋಷಿಸಿದೆ.
ರಾಕೆಟ್‌ ಅಪ್ಪಳಿಸಿದ್ದರಿಂದ ನೆಲದ ಮೇಲೆ ಯಾರಾದರೂ ಪರಿಣಾಮ ಬೀರಿದೆಯೆ ಎಂಬುದರ ಬಗ್ಗೆ ಫಿಲಿಪೈನ್ ಅಧಿಕಾರಿಗಳಿಂದ ತಕ್ಷಣ ಯಾವುದೇ ಮಾಹಿತಿ ಬಂದಿಲ್ಲ.

ಚೀನಾ ನಡೆಗೆ ನಾಸಾ ಟೀಕೆ: 
ಚೀನಾ ಉಡಾವಣೆ ಮಾಡಿದ್ದ ರಾಕೆಟ್ ಹಿಂದೂ ಮಹಾಸಾಗರದ ಸಮೀಪದಲ್ಲೆಲ್ಲೋ ಬಿದ್ದಿದೆ. ಆದರೆ ಎಲ್ಲಿ ಬಿದ್ದಿದೆ ಎಂಬ ಮಾಹಿತಿಯನ್ನು ಹಂಚಿಕೊಳ್ಳಲು ಚೀನಾ ಹಿಂದೇಟು ಹಾಕುತ್ತಿದೆ ಎಂದು ನಾಸಾ ಅಸಮಾಧಾನ ಹೊರಹಾಕಿತ್ತು. ಎಲ್ಲಾ ಅಂತರಿಕ್ಷಯಾನ ರಾಷ್ಟ್ರಗಳು ಉತ್ತಮ ನಡಾವಳಿಕೆಗಳನ್ನು ಪ್ರದರ್ಶಿಸಬೇಕು. ಮತ್ತು ಉಪಗ್ರಹಗಳಿಂದ ಎದುರಾಗುವ ಸಂಭಾವ್ಯ ಅಪಾಯವನ್ನು ತಡೆಯಲು ಮುಂಚಿತವಾಗಿ ಈ ರೀತಿಯ ಮಾಹಿತಿಯನ್ನು ಹಂಚಿಕೊಳ್ಳಬೇಕು ಎಂದು ನಾಸಾ ಚೀನಾ ಬಾಹ್ಯಾಕಾಶ ಸಂಸ್ಥೆ ವಿರುದ್ಧ ವಾಗ್ದಾಳಿ ನಡೆಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!