ಪುಕ್ಕಟೆ ವಿದ್ಯುತ್ ಘೋಷಣೆಗಳು ಖಜಾನೆಗೆ ಮಾಡುತ್ತಿರುವ ಪ್ರಹಾರ ಹೀಗಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜನಪ್ರಿಯತೆ ಮತ್ತು ಪ್ರೋತ್ಸಾಹದ ರಾಜಕೀಯವು ಭಾರತದ ಶಕ್ತಿ ಕ್ಷೇತ್ರದಲ್ಲಿನ ಹಿನ್ನಡೆಗೆ ಕಾರಣವಾಗುತ್ತಿದೆ. ಉಚಿತ ವಿದ್ಯುತ್‌ ಅಥವಾ ವಿದ್ಯುತ್‌ ಸಬ್ಸಿಡಿಗಳು ಹೊರೆಯಾಗಿ ಮಾರ್ಪಡುತ್ತಿದ್ದು ಇದು ರಾಜ್ಯಗಳ ಸಾಲ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಉಚಿತ ವಿದ್ಯುತ್ ಕೃತಕವಾಗಿ ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡುತ್ತದೆಯಾದರೂ ದೀರ್ಘಾವದಿಯಲ್ಲಿ ರಾಜ್ಯದ ಬೊಕ್ಕಸಕ್ಕೆ ಗಣನೀಯ ಹೊಡೆತವನ್ನು ಉಂಟುಮಾಡುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಗಳು ವಿದ್ಯುತ್ ವಿತರಣೆ ಮತ್ತು ಉತ್ಪಾದನಾ ಕಂಪನಿಗಳಿಗೆ ನೀಡಬೇಕಾದ ಹಣವನ್ನು ಪಾವತಿಸಲು ರಾಜ್ಯಗಳಿಗೆ ಒತ್ತಾಯಿಸಿದ್ದಾರೆ, ಈ ರೀತಿಯಾಗಿ ಪಾವತಿ ಮಾಡಬೇಕಿರುವ ಹಣದ ಒಟ್ಟು ಮೊತ್ತವು 2.5 ಲಕ್ಷ ಕೋಟಿ ರೂ. ಗಳಷ್ಟಿದೆ. ಉಚಿತ ವಿದ್ಯುತ್‌ ಯೋಜನೆಗಳು ಅಥವಾ ಸಬ್ಸಿಡಿಗಳ ಪಾವತಿಯಾಗದೆ ಡಿಸ್ಕಾಮ್‌ (ವಿತರಕ ಕಂಪನಿಗಳು) ನಷ್ಟದಲ್ಲಿ ಸಿಲುಕುವಂತೆ ಮಾಡಿದೆ. ಸಬ್ಸಿಡಿಗಳ ವಿಳಂಬ ಮತ್ತು ಪಾವತಿಸದ ಕಾರಣ ಡಿಸ್ಕಾಮ್‌ಗಳ ಹಣಕಾಸು ಹದಗೆಟ್ಟಿದೆ. ಇದು ರಾಜ್ಯದ ಸಾಲ ಹೆಚ್ಚಾಗಲು ಕಾರಣವಾಗಿದೆ. ಉಜ್ವಲ್ ಡಿಸ್ಕಮ್ ಅಶ್ಯೂರೆನ್ಸ್ ಯೋಜನೆ (ಉದಯ್) ಒಂದು ನಿರ್ದಿಷ್ಟ ಹೊರೆಯಾಗಿ ಮಾರ್ಪಟ್ಟಿದೆ. ವಿದ್ಯತ್‌ ಉತ್ಪಾದಕರುಗಳಿಗೆ ಡಿಸ್ಕಾಮ್‌ ಗಳು ಪಾವತಿಸಬೇಕಾದ ಮೊತ್ತವು ಹೆಚ್ಚಾಗುತ್ತಲೇ ಇದೆ. ಡಿಸ್ಕಾಮ್‌ಗಳ ನಷ್ಟವು 2018-19 ರಲ್ಲಿ UDAY ಪೂರ್ವದ ಮಟ್ಟವನ್ನು ಮೀರಿ GDP ಯ 0.4% ರಷ್ಟಾಗಿದೆ. 2017-18 ರಲ್ಲಿ ದೀರ್ಘಾವಧಿಯ ಸಾಲವು ಏರಿಕೆಯಾಗ ತೊಡಗಿದ ಈ ಸಾಲವು 2018-19 ರ ವೇಳೆಗೆ ಪೂರ್ವ UDAY ಮಟ್ಟವನ್ನು ಮೀರಿಸಿತು ಮತ್ತು 2019-20 ರಲ್ಲಿ ಮತ್ತಷ್ಟು ಏರಿಕೆಯಾಗಿದೆ.

ಬಿಹಾರ, ಕೇರಳ, ಪಂಜಾಬ್, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಸಾಲವಿದ್ದು ಇವುಗಳ ಒಟ್ಟೂ ಸಾಲದ ಮೊತ್ತವು 2019-20 ರಲ್ಲಿನ ಒಟ್ಟು ನಷ್ಟದ 24.7% ರಷ್ಟಿದೆ. ಇದಲ್ಲದೇ ವಿತರಣೆಯಲ್ಲಿನ ತಾಂತ್ರಿಕ ಮತ್ತು ವಾಣಿಜ್ಯ ನಷ್ಟಗಳು ಸುಮಾರು 22%,ರಷ್ಟಿದೆ. ಇವುಗಳಿಂದಾಗಿ ಡಿಸ್ಕಾಮ್‌ ಗಳು ನಷ್ಟ ಅನುಭವಿಸುವಂತಾಗಿದೆ. ಇದು ಭಾರತದ ಶಕ್ತಿ ಕ್ಷೇತ್ರದ ಕಾರ್ಯಸಾಧ್ಯತೆಯನ್ನು ದುರ್ಬಲಗೊಳಿಸಿದೆ. ಇದು ಪ್ರಮುಖ ಮೂಲಸೌಕರ್ಯ ವಲಯದ ಬೆಳವಣಿಗೆಗೆ ತೀವ್ರವಾಗಿ ಅಡ್ಡಿಯಾಗಬಹುದಾದ ಆತಂಕಕ್ಕೆ ಕಾರಣವಾಗಿದೆ. ರಾಜ್ಯಗಳು ತಮ್ಮ ಇಚ್ಛಾಶಕ್ತಿಯನ್ನು ಒಗ್ಗೂಡಿಸಿ ಉಚಿತ ಕೊಡುಗೆಗಳನ್ನು ಮತ್ತು ಸಬ್ಸಿಡಿಗಳಂತಹ ಅಲ್ಪಾವಧಿ ಪಾವತಿ ನೀಡುವುದನ್ನು ನಿಲ್ಲಿಸುವ ಮೂಲಕ ಈ ನಷ್ಟದ ಹೊರೆ ಕಡಿಮೆಮಾಡಲು ಪ್ರಯತ್ನಿಸುವುದು ಮುಂದಿರುವ ಆಯ್ಕೆಯಾಗಿದೆ. ರಾಜ್ಯದ ಉಪಯುಕ್ತತೆಗಳನ್ನು ಕಾರ್ಯಸಾಧ್ಯವಾಗುವಂತೆ ಮಾಡುವುದು, ಶಕ್ತಿಗಾಗಿ ಸಮರ್ಥ ಮಾರುಕಟ್ಟೆಯನ್ನು ಸೃಷ್ಟಿಸುವುದು, ಬಜೆಟ್ ಸಬ್‌ವೆನ್ಶನ್‌ಗಳನ್ನು ಪಾರದರ್ಶಕವಾಗಿಸುವುದು ಮತ್ತು ವಿತರಣೆಯಲ್ಲಿ ಮೂಲಸೌಕರ್ಯಗಳನ್ನು ನವೀಕರಿಸಲು ಹೆಚ್ಚಿನ ಸಂಪನ್ಮೂಲಗಳನ್ನು ನಿಯೋಜಿಸಬೇಕಿರುವುದು ಈಗ ಉಳಿದಿರುವ ಆಯ್ಕೆಗಳಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!