Friday, October 7, 2022

Latest Posts

ಪಾಕ್‌ನಲ್ಲಿ ಚೀನಾ ಮಿಲಿಟರಿ ಔಟ್‌ಪೋಸ್ಟ್?‌ ಪ್ರಧಾನಿ ಶೆಹಬಾಜ್ ಜೊತೆ ಚೀನಾ ಮಾತುಕತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾಕಿಸ್ತಾನದಲ್ಲಿ ತನ್ನ ಸೇನಾ ಹೊರಠಾಣೆಗಳನ್ನು ಸ್ಥಾಪಿಸಲು ಚೀನಾ ಮುಂದಾಗಿದೆ. ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆ ಜಾರಿಯಲ್ಲಿರುವುದು ಗೊತ್ತೇ ಇದೆ. ತಾಲಿಬಾನ್ ಆಳ್ವಿಕೆಯಲ್ಲಿರುವ ಅಫ್ಘಾನಿಸ್ತಾನದಿಂದ ಸಿಪಿಇಸಿ ಯೋಜನೆಗೆ ಅಪಾಯವಿದೆ ಎಂದು ಚೀನಾ-ಪಾಕ್ ಭಾವಿಸಿದ್ದು, ರಕ್ಷಣೆಗಾಗಿ ಸೇನಾ ಚೌಕಿ ನಿರ್ಮಾಣ ಮಾಡಲು ಚೀನಾ ಚಿಂತಿಸಿದೆ. ಪಾಕಿಸ್ತಾನ-ಆಫ್ಘಾನ್ ಗಡಿ ವಿಚಾರದಲ್ಲಿ ಉಭಯ ದೇಶಗಳ ನಡುವೆ ಭಿನ್ನಾಭಿಪ್ರಾಯಗಳಿಂದಾಗಿ ಈಗಾಗಲೇ ಗಡಿಯಲ್ಲಿ ಹಲವು ಬಾರಿ ಗುಂಡಿನ ದಾಳಿ ಸಹ ನಡೆದಿವೆ.

ಹೀಗಾಗಿ ಪಾಕಿಸ್ತಾನ-ಚೀನಾ ಅನುಕೂಲಕ್ಕಾಗಿ ಆ ಪ್ರದೇಶದಲ್ಲಿ ಸೇನಾ ಚೌಕಿಗಳನ್ನು ಸ್ಥಾಪಿಸಲು ಚೀನಾ ಮುಂದಾಗಿದೆ. ಚೀನಾ ರಾಯಭಾರಿ ನಾಂಗ್ ರಾಂಗ್ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್, ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಮತ್ತು ಸೇನಾ ಮುಖ್ಯಸ್ಥ ಜನರಲ್ ಬಜ್ವಾ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಪಾಕ್-ಅಫ್ಘಾನ್ ಮಾರ್ಗದ ಮೂಲಕ ಮಧ್ಯ ಏಷ್ಯಾದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸುವ ಆಶಯದೊಂದಿಗೆ ಚೀನಾ, ಆ ಎರಡು ದೇಶಗಳಲ್ಲಿ ಹೂಡಿಕೆಗಳನ್ನು ಮಾಡಿದೆ.

ಪಾಕಿಸ್ತಾನವು ಆರ್ಥಿಕವಾಗಿ ಮಾತ್ರವಲ್ಲದೆ ಮಿಲಿಟರಿ ಮತ್ತು ರಾಜತಾಂತ್ರಿಕವಾಗಿಯೂ ಚೀನಾವನ್ನು ಅವಲಂಬಿಸಿದೆ. ಈ ಹಿನ್ನೆಲೆಯಲ್ಲಿ ತನ್ನ ಸೇನಾ ಚೌಕಿಗಳನ್ನು ಸ್ಥಾಪಿಸಲು ಅನುಮತಿ ನೀಡುವಂತೆ ಚೀನಾ ಪಾಕಿಸ್ತಾನದ ಮೇಲೆ ಒತ್ತಡ ಹೇರುತ್ತಿದೆ. ಬೆಲ್ಟ್ ಅಂಡ್ ರೋಡ್ ಯೋಜನೆಯನ್ನು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಸಲು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ತಮ್ಮ ಮಿಲಿಟರಿ ಔಟ್‌ಪೋಸ್ಟ್‌ಗಳನ್ನು ಸ್ಥಾಪಿಸುವುದಾಗಿ ಚೀನಾದ ಅಧಿಕಾರಿಗಳು ಹೇಳುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!