ʼಲಾಲ್‌ ಸಿಂಗ್‌ ಚಡ್ಡಾʼ ಗಳಿಕೆ ಶೇ. 85 ರಷ್ಟು ಕುಸಿತ: ಶೀಘ್ರದಲ್ಲೇ ಥಿಯೇಟರ್‌ಗಳಿಂದ ಎತ್ತಂಗಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಅಮೀರ್ ಖಾನ್ ರ ʼಲಾಲ್ ಸಿಂಗ್ ಚಡ್ಡಾʼ ಬಾಕ್ಸ್‌ ಆಫೀಸ್‌ನಲ್ಲಿ ದಯನೀಯ ಸೋಲು ಕಂಡಿದೆ. ಆ.11 ರಂದು ಬಿಡುಗಡೆಯಾದಾಗಿನಿಂದ ಬಹುತೇಕ ಖಾಲಿ ಥಿಯೇಟರ್‌ಗಳಲ್ಲೇ ಪ್ರದರ್ಶನ ಕಾಣುತ್ತಿರುವ ಚಿತ್ರ ಬಿಡುಗಡೆಯಾದ ಒಂದು ವಾರದಲ್ಲೇ ಚಿತ್ರಮಂದಿರಗಳಿಂದ ಎತ್ತಂಗಡಿ ಯಾಗುವ ಹಂತದಲ್ಲಿದೆ. ಮಂಗಳವಾದ ಚಿತ್ರದ ಕಲೆಕ್ಷನ್ ಶೇ. 85 ರಷ್ಟು ಕುಸಿತ ಕಂಡಿದೆ.
ಬಾಲಿವುಡ್ ಹಂಗಾಮಾ ವರದಿ ಪ್ರಕಾರ, 180 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಚಿತ್ರ ಬಿಡುಗಡೆಯಾದ 5 ದಿನಗಳಲ್ಲಿ ಕೇವಲ 48 ಕೋಟಿ ಕಲೆಕ್ಷನ್‌ ಮಾಡಿದೆ. ಮಂಗಳವಾರ ಮತ್ತಷ್ಟು ಕಸಿತವಾಗಿದ್ದು, ಕೇವಲ 1.85 ರಿಂದ 2.15 ಕೋಟಿ ಮಾತ್ರವೇ ಕಲೆಕ್ಷನ್ ಆಗಿದೆ. ಕೆಲ ವರ್ಷದ ಹಿಂದೆ ತೆರೆಕಂಡಿದ್ದ ಅಮೀರ್ ಕೊನೆಯ ಚಿತ್ರ ʼಥಗ್ಸ್ ಆಫ್ ಹಿಂದೂಸ್ತಾನ್ʼ ದೊಡ್ಡ ಫ್ಲಾಪ್‌ ಎನಿಸಿಕೊಂಡಿತ್ತು. ಆದರೆ ಆ ಚಿತ್ರ ತನ್ನ ಆರಂಭಿಕ ದಿನಗಳಲ್ಲಿ ಗಳಿಸಿದ್ದಕ್ಕಿಂತ ʼಲಾಲ್‌ ಸಿಂಗ್‌ʼ ಗಳಿಕೆ ಕಡಿಮೆಯಾಗಿದೆ. ಈಗ ಮತ್ತೊಂದು ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಮಳುಗಡೆಯಾಗಿದ್ದು ಅಮಿರ್‌ ವೃತ್ತಿಜೀವನಕ್ಕೆ ದೊಡ್ಡ ಹೊಡೆತ ನೀಡಿದೆ.
ಮಂಗಳವಾರ ಸುಮಾರು 70 ಪ್ರತಿಶತದಷ್ಟು ಲಾಲ್ ಸಿಂಗ್ ಚಡ್ಡಾ ಶೋಗಳನ್ನು ರದ್ದುಗೊಳಿಸಲಾಗಿದೆ ಎಂದು ಬಾಲಿವುಡ್ ಹಂಗಾಮಾ ಹೇಳಿದೆ. ಒಂದೆರಡು ದಿನ ಇದೇ ಸನ್ನಿವೇಶ ಮುಂದುವರಿದರೆ ಚಿತ್ರ ಥಿಯೇಟರ್‌ನಿಂದ ಹೊರ ಬರುವ ಸಾಧ್ಯತೆ ಹೆಚ್ಚಿದೆ. ಅಕಾಡೆಮಿ ಪ್ರಶಸ್ತಿ ವಿಜೇತ ʼಫಾರೆಸ್ಟ್ ಗಂಪ್‌ʼ ರಿಮೇಕ್ ʼಲಾಲ್ ಸಿಂಗ್ ಚಡ್ಡಾʼ ಚಿತ್ರವನ್ನು ಪ್ರೇಕ್ಷಕರು ತಿರಸ್ಕರಿಸಿರುವುದು ಇದೀಗ ಅಂಕಿ ಅಂಶಗಳಿಂದ ಪಕ್ಕಾ ಆಗಿದೆ.
ಲಾಲ್ ಸಿಂಗ್ʼ ಕಳೆದೊಂದು ದಶಕದಲ್ಲಿ ಅಮೀರ್‌ ವೃತ್ತಿಜೀವನಕ್ಕೆ ಎದುರಾದ ಅತಿದೊಡ್ಡ ಸೋಲು ಎನ್ನಲಾಗುತ್ತಿದೆ. ಚಿತ್ರದ ಹೀನಾಯ ಸೋಲಿಗೆ ಅದರ ಸುತ್ತ ನಡೆಯುತ್ತಿರುವ ‘ಬಹಿಷ್ಕಾರ’ ಅಭಿಯಾನಗಳು ಕಾರಣವೆಂದು ವಿಮರ್ಷಕರು ಹೇಳುತ್ತಿದ್ದಾರೆ. ಚಿತ್ರಕ್ಕೆ ಹೆಚ್ಚಾಗಿ ನೆಗೆಟಿವ್ ವಿಮರ್ಶೆಗಳು ಕೇಳಿಬಂದಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!