ದೇಶದ ಭದ್ರತೆಗೆ ಅಪಾಯ: ಚೀನಾದ 54 ಅಪ್ಲಿಕೇಷನ್‌ಗಳು ಬ್ಯಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಭದ್ರತೆ ಮತ್ತೆ ಭದ್ರತೆಗೆ ಅಪಾಯ ಆಗುವಂತಹ ಚೀನಾದ 54 ಆಪ್‌(app)ಗಳನ್ನು ನಿಷೇಧಿಸಲಾಗಿದೆ.

ಚೀನಾದ ಆಪ್‌ಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ 54 ಆಪ್‌ಗಳನ್ನು ಬ್ಯಾನ್ ಮಾಡಿದೆ. ಈ ಹಿಂದೆಯೂ ಭದ್ರತೆಗೆ ಅಪಾಯ ತರುವ ಆಪ್‌ಗಳನ್ನು ಸರ್ಕಾರ ಬ್ಯಾನ್ ಮಾಡಿದ್ದು, ಅವು ಬೇರೆ ಹೆಸರಿದೊಂದಿಗೆ ಮತ್ತೆ ಭಾರತ ಪ್ರವೇಶಿಸಿದ್ದವು. ಅಂತಹ ಆಪ್‌ಗಳನ್ನು ಹುಡುಕಿ ಈಗ ಮತ್ತೆ ಬ್ಯಾನ್ ಮಾಡಲಾಗಿದೆ.

2020 ರಲ್ಲಿ ಚೀನಾದ ಗೇಮಿಂಗ್ ಆಧಾರಿತ ನೆಟ್‌ಈಸ್, ಅಲಿಬಾಬಾ ಎನ್ನುವ ಆಪ್‌ಗಳಿಗೆ ನಿಷೇಧ ಹೇರಲಾಗಿತ್ತು. ಇದೀಗ ಆ ಆಪ್‌ಗಳಿಗೆ ಬೇರೆ ಹೆಸರಿಟ್ಟು ಮತ್ತೆ ಮಾರುಕಟ್ಟೆ ರೀ ಲಾಂಚ್ ಮಾಡಲಾಗಿದೆ. ಈ ಆಪ್‌ಗಳ ಮೂಲಕ ದೇಶದ ಸೂಕ್ಷ್ಮ ಮಾಹಿತಿ ಪಡೆಯಲಾಗುತ್ತಿತ್ತು. ಚೀನಾದ 54  ನಿಷೇಧಿತ ಆಪ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಕಿತ್ತು ಹಾಕಲಾಗಿದೆ. ಒಟ್ಟಾರೆ 2020 ರಿಂದ ಈವರೆಗೆ 224 ಆಪ್‌ಗಳನ್ನು ಸರ್ಕಾರ ಬ್ಯಾನ್ ಮಾಡಿದೆ. ಮೊದಲ ಹಂತದಲ್ಲಿ ಜನಪ್ರಿಯ ಟಿಕ್‌ಟಾಕ್, ಶೇರ್‌ಚಾಟ್,ವಿಚಾಟರ್,ಹೆಲೊನಂಥ ಆಪ್‌ಗಳನ್ನು ಬ್ಯಾನ್ ಮಾಡಲಾಗಿತ್ತು.

ಯಾವ ಆಪ್‌ಗಳು ಬ್ಯಾನ್ ಆಗಿವೆ?
ಸ್ವೀಟ್​ ಸೆಲ್ಫಿ ಹೆಚ್​ಡಿ, ಬ್ಯೂಟಿ ಕ್ಯಾಮೆರಾ-ಸೆಲ್ಫಿ ಕ್ಯಾಮೆರಾ, ಈಕ್ವಲೈಸರ್​ ಅಂಡ್​ ಬಾಸ್​ ಬೂಸ್ಟರ್​, ಕ್ಯಾಮ್​ಕಾಡ್​ ಫಾರ್​ ಸೇಲ್ಸ್​ಫೋರ್ಸ್​ ಎಂಟ್​, ಐಸೋಲ್ಯಾಂಡ್​-2: ಆ್ಯಶಸ್​ ಆಫ್​ ಟೈಮ್​ ಲೈಟ್​, ವಿವಾ ವಿಡಿಯೋ ಎಡಿಟರ್​, ಟೆನ್​ಸೆಂಟ್​ ಎಕ್ಸ್​ರೀವರ್​, ಆನ್​ಮೋಯ್ಜಿ ಚೆಸ್​, ಆನ್​ಮೋಯ್ಜಿ ಅರೇನಾ, ಆ್ಯಪ್​ಲಾಕ್​, ಡ್ಯುಯಲ್​ ಸ್ಪೇಸ್​ ಲೈಟ್ ಸೇರಿದಂತೆ ಇನ್ನಷ್ಟು ಆಪ್‌ಗಳು ಬ್ಯಾನ್ ಆಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!