Friday, August 12, 2022

Latest Posts

ಬುರ್ಖಾ, ಹಿಜಾಬ್ ಹಾಕದಿರೋದೇ ಅತ್ಯಾಚಾರಕ್ಕೆ ಕಾರಣ, ಇದು ಕಾಂಗ್ರೆಸ್ ಶಾಸಕ ಜಮೀರ್ ವ್ಯಾಖ್ಯಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬುರ್ಖಾ, ಹಿಜಾಬ್ ಹಾಕದಿರುವುದೇ ಅತ್ಯಾಚಾರಕ್ಕೆ ಕಾರಣ ಎಂದು ಕಾಂಗ್ರೆಸ್ ಶಾಸಕ ಜಮೀರ್ ಹೇಳಿದ್ದಾರೆ.

ಕುರಾನ್‌ನಲ್ಲಿ ಎಲ್ಲಿಯೂ ಹಿಜಾಬ್ ಧರಿಸುವ ಬಗ್ಗೆ ಉಲ್ಲೇಖವಾಗಿಲ್ಲ, ಹಿಜಾಬ್ ಧರಿಸುವುದು ಅತ್ಯಾವಶ್ಯ ಎಂದು ಹೇಳಲಾಗುತ್ತಿದೆ ಇದರ ಬಗೆಗಿನ ಅಭಿಪ್ರಾಯ ಏನು ಎಂದು ಬಂದ ಪ್ರಶ್ನೆಗೆ ಉತ್ತರಿಸಿದ್ದು, ಯಾರು ಯಾವ ರೀತಿಯಲ್ಲಿ ಹೇಳಿದ್ದಾರೆ ನನಗೆ ತಿಳಿದಿಲ್ಲ. ಹಿಜಾಬ್ ಎಂದರೆ ಪರದೆ ಎಂದು ಅರ್ಥ. ಯಾರು ಹೀಗೆಲ್ಲಾ ಹೇಳುತ್ತಾರೋ ಅವರ ಮನೆಯಲ್ಲಿ ಹೆಣ್ಣುಮಕ್ಕಳು ಇದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ.

ಹೆಣ್ಣುಮಕ್ಕಳು ಮನೆಯಲ್ಲಿ ಇದ್ದರೆ ಯಾರೂ ಹೀಗೆ ಮಾತನಾಡುವುದಿಲ್ಲ. ಹೆಣ್ಣುಮಕ್ಕಳು ವಯಸ್ಸಿಗೆ ಬಂದ ನಂತರ ಅವರಿಗೆ ಪರದೆ ಹಾಕುತ್ತೇವೆ. ಹೆಣ್ಣುಮಕ್ಕಳ ಸೌಂದರ್ಯ ಹೊರಜಗತ್ತಿಗೆ ಕಾಣಬೇಕು ಎಂದಿಲ್ಲ. ನಿಮಗೇ ತಿಳಿದಿದೆ. ಭಾರತದಲ್ಲಿ ರೇಪ್ ರೇಟ್ ಹೇಗೆ ಹೆಚ್ಚಾಗುತ್ತಿದೆ. ಭಾರತದಲ್ಲೇ ಹೆಚ್ಚು ಹೆಣ್ಣುಮಕ್ಕಳು ಅತ್ಯಾಚಾರಕ್ಕೆ ಒಳಗಾಗುತ್ತಿರೋದಕ್ಕೆ ಹಿಜಾಬ್ ಧರಿಸದ್ದೇ ಕಾರಣವಾಗಿದೆ.
ಆದರೆ ಇದ್ಯಾವುದೂ ಕಡ್ಡಾಯ ಮಾಡಿಲ್ಲ. ಇಷ್ಟ ಇದ್ದವರು ಬುರ್ಖಾ, ಹಿಜಾಬ್ ಧರಿಸಬಹುದು, ಬೇಡವಾದವರು ಬಿಡಬಹುದು. ಸೌಂದರ್ಯ ಜಗತ್ತಿಗೆ ತೋರಿಕೆ ಮಾಡುವುದರಿಂದ ಅತ್ಯಾಚಾರಗಳು ಹೆಚ್ಚಾಗುತ್ತಿವೆ. ಹಿಜಾಬ್ ಇಂದು ನೆನ್ನೆಯ ವಿಷಯ ಅಲ್ಲ, ಇದಕ್ಕೆ ದೊಡ್ಡ ಇತಿಹಾಸ ಇದೆ ಎಂದಿದ್ದಾರೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss