ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾ ಬೇಹುಗಾರಿಕಾ ಹಡಗು ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಂಗಾಳ ಕೊಲ್ಲಿಯಲ್ಲಿ ಭಾರತವು ಖಂಡಾಂತರ ಕ್ಷಿಪಣಿಯನ್ನು ಉಡಾಯಿಸುವ ಯೋಜಿತ ಪರೀಕ್ಷಾರ್ಥ ಉಡಾವಣೆಗೆ ಮುನ್ನ ಚೀನಾದ ಬೇಹುಗಾರಿಕಾ ಹಡಗು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಪ್ರತ್ಯಕ್ಷವಾಗಿದೆ.

ಚೀನಾದ ಬೇಹುಗಾರಿಕಾ ಹಡಗು ‘ಯುವಾನ್ ವಾಂಗ್ 5’ ಟ್ರ್ಯಾಕಿಂಗ್ ಮತ್ತು ಕಣ್ಗಾವಲು ಸಾಧನಗಳನ್ನ ಹೊತ್ತೊಯ್ಯುತ್ತಿದೆ ಎಂದು ತಿಳಿದುಬಂದಿದೆ.  ಭಾರತೀಯ ನೌಕಾಪಡೆಯು ಚೀನಾದ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಉಪಗ್ರಹ ಟ್ರ್ಯಾಕಿಂಗ್ ನೌಕೆಯ ಚಲನವಲನದ ಮೇಲೆ ಕಣ್ಣಿಟ್ಟಿದೆ.

ಆದಾಗ್ಯೂ, ಹಡಗಿನ ಚಟುವಟಿಕೆಗಳ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ.

ಚೀನಾದ ಸಂಶೋಧನಾ ಹಡಗು ‘ಯುವಾನ್ ವಾಂಗ್ 5’ ಅನ್ನು ಭಾರತೀಯ ಮಿಲಿಟರಿ ನೆಲೆಗಳ ಮೇಲೆ ಗೂಢಚರ್ಯೆ ಮಾಡಲು ಬಳಸಬಹುದು ಎಂದು ಕಳವಳ ವ್ಯಕ್ತಪಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!