ಮಕ್ಕಳು ಓದೋದ್ರಲ್ಲಿ ಹಿಂದೆ ಇದ್ದಾರಾ? ಇದಕ್ಕೆ ಕಾರಣ ನೀವೇ ಇರಬಹುದು..

ಎಲ್ಲಾ ಪೋಷಕರಿಗೂ ತಮ್ಮ ಮಕ್ಕಳು ತರಗತಿಯಲ್ಲಿ ಮೊದಲ ಸ್ಥಾನದಲ್ಲಿ ಇರಬೇಕು. ಓದೋದಷ್ಟೇ ಯಾಕೆ? ಸ್ಪೋರ್ಟ್ಸ್, ಡ್ಯಾನ್ಸ್, ಸಂಗೀತದಲ್ಲಿಯೂ ಅವರೇ ಫಸ್ಟ್ ಬರಬೇಕು. ಇಷ್ಟೆಲ್ಲಾ ಚಟುವಟಿಕೆಗಳಲ್ಲಿ ಮೊದಲ ಸ್ಥಾನ ತಂದ ಮಕ್ಕಳು ಓದೋದ್ರಲ್ಲಿ ಎರಡು ಅಂಕಿ ಕಡಿಮೆಯಾದರೂ ತಂದೆ ತಾಯಿಗೆ ಸಮಾಧಾನವಿಲ್ಲ. ಮಕ್ಕಳು ಓದೋದ್ರಲ್ಲಿ ಹಿಂದೆ ಬೀಳೋಕೆ ನೀವು ಕಾರಣ ಇರಬಹುದು.. ಹೇಗೆ ನೋಡಿ..

  • ಮಕ್ಕಳ ಮೇಲೆ ಒತ್ತಡ ಹೇರುವುದನ್ನು ನಿಲ್ಲಿಸಿ, ಇಷ್ಟಪಟ್ಟು ಓದಲು ಹೇಳಿ. ಆಗ ನೋಡಿ ಅಂಕಗಳು ತಾನಾಗೇ ಹೆಚ್ಚಾಗುತ್ತವೆ.
  • ಮಕ್ಕಳ ಜೊತೆ ಆಟ ಆಡಿ, ನೆನಪಿನ ಶಕ್ತಿ ಹೆಚ್ಚುವ ಗೇಮ್ಸ್‌ನಲ್ಲಿ ಮಕ್ಕಳನ್ನು ಬ್ಯುಸಿ ಮಾಡಿ, ಅದನ್ನು ಬಿಟ್ಟು ಓದು ಎಂದು ಕೋಲು ಹಿಡಿದು ಕೂರಬೇಡಿ.
  • ಪುಸ್ತಕಗಳನ್ನು ಓದಿ ಎಂದು ಕೂಗಾಡುವ ಬದಲು ನೀವು ಪುಸ್ತಕ ಓದಿ. ಅದರ ಬಗ್ಗೆ ಮಾತನಾಡಿ, ಕೆಲ ಆಸಕ್ತಿಕರ ವಿಷಯಗಳ ಬಗ್ಗೆ ಮಕ್ಕಳಿಗೆ ಹೇಳಿ.
  • ಕಥೆ ಹೇಳುತ್ತಾ ಅದನ್ನು ಇಮ್ಯಾಜಿನ್ ಮಾಡುವಂತೆ ಮಕ್ಕಳಿಗೆ ಹೇಳಿ. ಇದರಿಂದ ಮಿದುಳು ಹೆಚ್ಚು ಕ್ರಿಯೇಟಿವ್ ಆಗುತ್ತದೆ.
  • ಅವರಿಗೆ ಇಷ್ಟವಾದ ನೆನಪುಗಳ ಬಗ್ಗೆ ಮಾತನಾಡಿ, ಟ್ರಿಪ್ ಗೆ ಹೋದಾಗ ಏನಾಗಿತ್ತು., ಅಜ್ಜಿ ಮನೆಯಲ್ಲಿ ಏನೆಲ್ಲಾ ಮಾಡಿದ್ರು ಹೀಗೆ.. ನೆನಪುಗಳನ್ನು ಕೆದಕಿ.
  • ಸಂಬಂಧಗಳನ್ನು ಜೋಡಿಸಲು ಅವರ ಮೆದುಳಿಗೆ ಸಹಾಯ ಮಾಡಿ.
  • ಕಾರ್ಡ್‌ಗಳನ್ನು ಬಳಸಿ ಆಡುವ ಆಟಗಳನ್ನು ಮಕ್ಕಳಿಗೆ ಹೇಳಿಕೊಡಿ, ಚೆಸ್ ಆಡುವುದನ್ನೂ ಕಲಿಸಿ.
  • ಆರೋಗ್ಯಕರ, ಮೆದುಳು ಚುರುಕಾಗುವ ಊಟ ತಿಂಡಿ ನೀಡಿ.
  • ಬ್ಲಾಕ್, ಪಝಲ್‌ಗಳ ಜೊತೆ ಆಡಲು ಬಿಡಿ. ಇದು ಅವರನ್ನು ಹೆಚ್ಚು ಶಾರ್ಪ್ ಮಾಡುತ್ತದೆ.
  • ಪೋಷಕರಾಗಿ ನೀವು ಅವರನ್ನು ನಂಬಿ. ಅವರ ಮಾತುಗಳಿಗೆ ಪ್ರಾಮುಖ್ಯತೆ ನೀಡಿ. ಅವರ ಸಣ್ಣ ಮಾತನ್ನೂ ಇಗ್ನೋರ್ ಮಾಡಬೇಡಿ.
  • ಅವರ ಸಣ್ಣಪುಟ್ಟ ಬೆಳವಣಿಗೆಗೂ ಗುಡ್ ಎನ್ನಿ, ಹೊಗಳಿ. ಇನ್ನೂ ಚೆನ್ನಾಗಿ ಮಾಡುವಂತೆ ಹೇಳಿಕೊಡಿ.
  • ಲೆಕ್ಕ ಕಲಿಸಲು ಕುಂಟಾಬಿಲ್ಲೆ ಆಟ ಆಡಿಸಿ, ಆಟದ ಜೊತೆ ಪಾಠವಾದ್ರೆ ಮಕ್ಕಳು ಜಾಣರಾಗುತ್ತಾರೆ.
  • ಮಕ್ಕಳ ಜೊತೆ ನಗುತ್ತಾ ಮಾತನಾಡಿ, ಅವರನ್ನೂ ನಗಲು ಬಿಡಿ. ಹೆಚ್ಚು ನಗುವ ಮಕ್ಕಳು ಆರೋಗ್ಯವಾಗಿ ಇರುತ್ತಾರೆ. ಮಾನಸಿಕ ಆರೋಗ್ಯದಿಂದ ಎಲ್ಲವೂ ಸಾಧ್ಯ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!