ಕೇಂದ್ರ ಬಜೆಟ್ 2022 ಘೋಷಣೆಗಳ ಅನುಷ್ಠಾನಕ್ಕೆ ಶಿಕ್ಷಣ ಸಚಿವಾಲಯದಿಂದ ಚಿಂಥನ ಮಂಥನ ವೆಬಿನಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್

ಹೊಸದಿಲ್ಲಿ: ಬಜೆಟ್ ಘೋಷಣೆಗಳ ಪರಿಣಾಮಕಾರಿ ಮತ್ತು ತ್ವರಿತ ಅನುಷ್ಠಾನಕ್ಕೆ ಸಹಾಯಕವಾಗುವಂತೆ, ಭಾರತ ಸರಕಾರವು ವಿವಿಧ ಪ್ರಮುಖ ವಲಯಗಳಲ್ಲಿ ಸರಣಿ ವೆಬಿನಾರ್‌ಗಳನ್ನು ನಡೆಸುತ್ತಿದೆ. ಸಾರ್ವಜನಿಕ ಮತ್ತು ಖಾಸಗಿ ವಲಯಗಳು, ಶೈಕ್ಷಣಿಕ ಮತ್ತು ಉದ್ಯಮದ ತಜ್ಞರೊಂದಿಗೆ ಚಿಂಥನ ಮಂಥನ ನಡೆಸುವುದು ಮತ್ತು ನಾನಾ ಕ್ಷೇತ್ರಗಳ ಅಡಿಯಲ್ಲಿ ವಿವಿಧ ಸಮಸ್ಯೆಗಳನ್ನು ನಿವಾರಿಸಿ ಹೇಗೆ ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಲು ಮುಂದಾಗಬಹುದೆಂಬುದರ ಕುರಿತು ಕಾರ್ಯತಂತ್ರಗಳನ್ನು ರೂಪಿಸುವುದು ಇದರ ಉದ್ದೇಶ.

ಈ ಸರಣಿಯ ಭಾಗವಾಗಿ ಭಾರತ ಸರಕಾರದ ಶಿಕ್ಷಣ ಸಚಿವಾಲಯ, ಶಿಕ್ಷಣ ಮತ್ತು ಕೌಶಲ ವಲಯದ ವೆಬಿನಾರ್ ಅನ್ನು ಫೆ. 21ರಂದು ಆಯೋಜಿಸಿದೆ. ವೆಬಿನಾರ್ ಪ್ರಸ್ತುತ ಅಗತ್ಯವಿರುವ ಹಲವು ವಿಷಯಗಳ ಕುರಿತು ಗೋಷ್ಠಿಗಳನ್ನು ಹೊಂದಿರುತ್ತದೆ. ವಿವಿಧ ಸಚಿವಾಲಯಗಳು ಮತ್ತು ರಾಜ್ಯ ಸರಕಾರಗಳ ಅಧಿಕಾರಿಗಳು, ಉದ್ಯಮ ಪ್ರತಿನಿಧಿಗಳು, ಕೌಶಲ ಅಭಿವೃದ್ಧಿ ಸಂಸ್ಥೆಗಳು, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು ಮತ್ತು ಇತರ ತಜ್ಞರು ಭಾಗವಹಿಸುವ ಮೂಲಕ ಇದಕ್ಕೆ ಸಾಕ್ಷಿಯಾಗಲಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾಷಣದ ಜೊತೆಗೆ ಏಳು ಗುರುತಿಸಲಾದ ವಿಷಯಗಳ ಅಡಿಯಲ್ಲಿ ಸಮಾನಾಂತರ ಬ್ರೇಕ್ ಔಟ್ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಗೋಷ್ಠಿಯಲ್ಲಿ ಭಾಗವಹಿಸುವ ತಂಡಗಳು ಶಿಕ್ಷಣ ಸುಲಭವಾಗಿ ಲಭ್ಯವಾಗುವಂತೆ ಮಾಡುವ ತತ್ವಗಳಿಗೆ ಅನುಗುಣವಾಗಿ ಕ್ರಿಯಾತ್ಮಕ ಅಂಶಗಳು, ವಿಶಾಲವಾದ ಕಾರ್ಯತಂತ್ರಗಳು ಮತ್ತು ಅನುಷ್ಠಾನಕ್ಕೆ ಕಾಲಮಿತಿ ನಿಗದಿ ಹಾಗೂ ಉದ್ಯೋಗಾವಕಾಶಗಳನ್ನು ಬಳಸಿಕೊಳ್ಳುವುದರ ಕುರಿತು ಕಾರ್ಯತಂತ್ರ ಅಂಶಗಳನ್ನು ಗುರುತಿಸಲಿವೆ.

ವೆಬಿನಾರ್‌ನಲ್ಲಿ ಗುರುತಿಸಲಾಗಿರುವ ವಿಷಯಗಳು:

1. ಡಿಜಿಟಲ್ ವಿಶ್ವವಿದ್ಯಾಲಯ: ವಿಶ್ವದರ್ಜೆಯ ಉನ್ನತ ಶಿಕ್ಷಣ ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು.

2. ಡಿಟಜಿಲ್ ಶಿಕ್ಷಕರು: ಗುಣಮಟ್ಟದ ಇ-ಪಠ್ಯ ಸೃಷ್ಟಿಸುವುದು ಮತ್ತು ಎಲ್ಲವನ್ನೂ ಒಳಗೊಂಡ ಮತ್ತು ಉತ್ತಮ ಕಲಿಕಾ ಫಲಿತಾಂಶ ಮತ್ತು ಕೌಶಲದ ವರ್ಚುವಲ್ ಲ್ಯಾಬ್‌ಗಳನ್ನು ನಿರ್ಮಿಸುವುದು.

3. ಒಂದು ತರಗತಿ ಒಂದು ಚಾನೆಲ್ ವ್ಯಾಪಕ ವಿಸ್ತರಣೆ: ದೇಶದ ಮೂಲೆ ಮೂಲೆಗೂ ಗುಣಮಟ್ಟದ ಡಿಜಿಟಲ್ ಶಿಕ್ಷಣವನ್ನು ತಲುಪಿಸುವುದು.

4. ನಗರ ಯೋಜನೆ ಮತ್ತು ವಿನ್ಯಾಸದಲ್ಲಿ ಭಾರತ ಕೇಂದ್ರಿತ ಜ್ಞಾನ.

5. ಬಲಿಷ್ಠ ಕೈಗಾರಿಕಾ-ಕೌಶಲ ಸಂಪರ್ಕ ಬೆಳೆಸುವ ನಿಟ್ಟಿನೆಡೆಗೆ.

6. ಗಿಫ್ಟ್ ಸಿಟಿಗಳಲ್ಲಿ ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿ.

7. ಎವಿಜಿಸಿಯಲ್ಲಿ ಕೈಗಾರಿಕಾ-ಕೌಶಲ ಸಂಪರ್ಕ ಬಲವರ್ಧನೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!