ರೇವ್​ ಪಾರ್ಟಿಯಲ್ಲಿ ಚಿರಂಜೀವಿ ಕುಟುಂಬದ ಮನೆ ಮಗಳು: ಏನು ಅಂದ್ರು ನಾಗಬಾಬು!

ಹೊಸದಿಗಂತ ಡಿಜಿಟಲ್ ಡೆಸ್ಕ್

ಬಾಲಿವುಡ್ ಅಂಗಳದಲ್ಲಿದ್ದ ಡ್ರಗ್ಸ್ ಇದೀಗ ಟಾಲಿವುಡ್ ಕಡೆಗೂ ವಾಲಿದ್ದು, ಆಂಧ್ರಪ್ರದೇಶದ ಚಿತ್ರರಂಗದ ತಾರಾ ವಲಯದಲ್ಲಿ ಡ್ರಗ್ಸ್ ಪ್ರಕರಣ ಸುದ್ದಿಯಾಗಿದೆ.
ಹೈದರಾಬಾದ್ ನಗರದ ಬಂಜಾರಾ ಹಿಲ್ಸ್​​ನಲ್ಲಿ ಖಾಸಗಿ ಹೋಟೆಲ್​ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಗೆ ಪೊಲೀಸರು ದಾಳಿ ನಡೆಸಿದ್ದು, ಹಲವರನ್ನು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ನಟ, ನಿರ್ಮಾಪಕ ನಾಗಬಾಬು ಅವರ ಪುತ್ರಿ ನಿಹಾರಿಕಾ ಕೊನಿಡೇಲಾ ಕೂಡ ಇದ್ದರು.
ಆದರೆ ಪುತ್ರಿಯ ಕುರಿತು ನಾಗಬಾಬು ಸ್ಪಷ್ಟನೆ ನೀಡಿದ್ದು, ನಿಹಾರಿಕಾ ಕೊನಿಡೇಲಾ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿರುವ ಬಗ್ಗೆ ಅಧಿಕೃತ ವಿಡಿಯೋ ಹೇಳಿಕೆಯನ್ನು ನಾಗಬಾಬು ಬಿಡುಗಡೆ ಮಾಡಿದ್ದಾರೆ. ನಿಹಾರಿಕಾ ಪಬ್​ನಲ್ಲಿದ್ದುದನ್ನು ಖಚಿತಪಡಿಸಿರುವ ನಾಗಬಾಬು, ಆದರೆ ನಿಹಾರಿಕಾ ಈ ಪ್ರಕರಣದಲ್ಲಿಲ್ಲ. ಅವರು ಕ್ಲೀನ್​ ಹ್ಯಾಂಡ್. ನಿಹಾರಿಕಾ ಅಲ್ಲಿ ತೆರಳಿದ್ದುದು ಕೇವಲ ಕಾಕತಾಳೀಯ ಎಂದಿದ್ದಾರೆ.

“ನನ್ನ ಮಗಳು ನಿಹಾರಿಕಾ ನಿನ್ನೆ ರಾತ್ರಿ ಪಂಚತಾರಾ ಹೋಟೆಲ್‌ನ ಪಬ್‌ನಲ್ಲಿದ್ದರು. ಬಂದ್​ ಮಾಡುವ ಸಮಯದ ನಂತರವೂ ಕಾರ್ಯನಿರ್ವಹಿಸುತ್ತಿದ್ದ ಕಾರಣ, ಪಬ್ ನಡೆಸುತ್ತಿದ್ದ ಆಡಳಿತ ಮಂಡಳಿಯನ್ನು ಪೊಲೀಸರು ಬಂಧಿಸಿದ್ದಾರೆ. ನಿಹಾರಿಕಾ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿಲ್ಲ, ವಶಪಡಿಸಿಕೊಂಡ ಡ್ರಗ್ಸ್​ಗೂ ಆಕೆಗೂ ಸಂಬಂಧವಿಲ್ಲ ಎಂದು ಪೊಲೀಸರು ಖಚಿತಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುತ್ತಿರುವ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿರುವ ನಾಗಬಾಬು, ಅಂತಹ ಸುದ್ದಿಗಳನ್ನು ಹಬ್ಬಿಸಬೇಡಿ ಎಂದೂ ಹೇಳಿದ್ದಾರೆ. ಭಾನುವಾರ ಮುಂಜಾನೆ, ಬಂಜಾರಾ ಹಿಲ್ಸ್‌ನ ಖಾಸಗಿ ಪಬ್‌ನಲ್ಲಿ ಅವಧಿ ಮೀರಿದರೂ ಪಾರ್ಟಿ ಮಾಡುತ್ತಿದ್ದ ಸುಮಾರು 150 ಜನರನ್ನು ಬಂಧಿಸಲಾಗಿತ್ತು. ಈ ವೇಳೆ ಅಲ್ಲಿ ನಿಷೇಧಿತ ವಸ್ತುಗಳು ಪತ್ತೆಯಾಗಿದ್ದು, ಎಲ್ಲರನ್ನೂ ಟೆಸ್ಟ್​ಗೆ ಒಳಪಡಿಸಲಾಗಿದೆ. ನಿಹಾರಿಕಾರ ಫಲಿತಾಂಶದ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!