Follow Up | ಹಳಿ ತಪ್ಪಿದ ಲೋಕಮಾನ್ಯ ತಿಲಕ್​ ಎಕ್ಸ್​​ಪ್ರೆಸ್​ ರೈಲು​: ಓರ್ವ ಸಾವು, ಹಲವರಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್

ಮಹಾರಾಷ್ಟ್ರದ ನಾಸಿಕ್​ ಬಳಿ ಎಕ್ಸ್​​ಪ್ರೆಸ್​ ರೈಲೊಂದು ಹಳಿ ತಪ್ಪಿರುವ ಘಟನೆ ನಡೆದಿದ್ದು, ಅಪಘಾತದಲ್ಲಿ ಹಲವಾರು ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದು, ಹಲವರಿಗೆ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಎಲ್‌ಟಿಟಿ ಜಯನಗರ ಎಕ್ಸ್‌ಪ್ರೆಸ್ ರೈಲು ನಾಸಿಕ್ ಜಿಲ್ಲೆಯ ಲಹ್ವಿತ್ ಮತ್ತು ಡಿಯೋಲಾಲಿ ನಡುವೆ ಸುಮಾರು 6 ಬೋಗಿಗಳು ಹಳಿತಪ್ಪಿದೆ.
ಅಪಘಾತದ ಬಗ್ಗೆ ಮಾಹಿತಿ ಪಡೆದ ರೈಲ್ವೇ ಅಧಿಕಾರಿಗಳು, ರೈಲ್ವೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ರೈಲು ಹಳಿ ತಪ್ಪಿ ಪ್ರಯಾಣಿಕರು ಗಾಯಗೊಂಡಿದ್ದು, ಘಟನಾ ಸ್ಥಳದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
11061 ಎಲ್‌ಟಿಟಿ-ಜಯನಗರ ಎಕ್ಸ್‌ಪ್ರೆಸ್‌ನ ಕೆಲವು ಕೋಚ್‌ಗಳು ಮಧ್ಯಾಹ್ನ 3.10ರ ಸುಮಾರಿಗೆ ಹಳಿತಪ್ಪಿದವು ಎಂದು ಕೇಂದ್ರ ರೈಲ್ವೆ ಟ್ವೀಟ್ ಮಾಡಿದೆ. ಹಲ್ವಿಟ್‌ನಿಂದ ಡಿಯೋಲಾಲಿ (ನಾಸಿಕ್ ಬಳಿ) ನಡುವಿನ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ.
ಅಪಘಾತದ ನಂತರ ಕೇಂದ್ರ ರೈಲ್ವೇ ಸಹಾಯವಾಣಿ ಸಂಖ್ಯೆಯನ್ನು ನೀಡಿದೆ. CSMT ನಿಲ್ದಾಣದ TC ಕಛೇರಿ – 55993 ಮತ್ತು MTNL 02222694040 ಇವು ರೈಲ್ವೇ ನೀಡಿದ ಸಹಾಯವಾಣಿ ಸಂಖ್ಯೆಗಳಾಗಿವೆ.
ಇನ್ನು ರೈಲು ಅಪಘಾತದ ನಂತರ ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದೆ ಮತ್ತು ಕೆಲವು ಮಾರ್ಗಗಳನ್ನು ಬದಲಾಯಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!