ʻಮೆಗಾ 154ʼ ಚಿತ್ರದ ಬಗ್ಗೆ ಕ್ಲೂ ಕೊಟ್ಟ ನಟ ಚಿರಂಜೀವಿ: ಮೆಗಾಸ್ಟಾರ್‌ ಪಾತ್ರದ ಬಗ್ಗೆ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಚಿರಂಜೀವಿ ಅಭಿನಯದ ಗಾಡ್ ಫಾದರ್ ಸಿನಿಮಾ ಭರ್ಜರಿ ಯಶಸ್ಸು ಕಂಡಿದ್ದು ಗೊತ್ತೇ ಇದೆ. ಸಿನಿಮಾ ನೋಡಿದ ಪ್ರೇಕ್ಷಕರೆಲ್ಲ ಬಾಸ್ ಈಸ್ ಬ್ಯಾಕ್ ಎನ್ನುತ್ತಿದ್ದಾರೆ. ಬಹುದಿನಗಳ ನಂತರ ಭರ್ಜರಿ ಗೆಲುವಿನ ಸಂಭ್ರಮದಲ್ಲಿ ಚಿರು, ಅಭಿಮಾನಿಗಳು ಇದ್ದಾರೆ. ಹಾಗಾಗಿ ಗಾಡ್‌ಫಾದರ್ ಚಿತ್ರದ ಸಕ್ಸಸ್ ಮೀಟ್ ನಡೆಸಿದರು, ಈ ಸಂದರ್ಭದಲ್ಲಿ ಚಿರಂಜೀವಿ ಅವರ ತಮ್ಮ ಮುಂದಿನ ಸಿನಿಮಾ ಬಗ್ಗೆ ಕ್ಲೂ ಕೊಟ್ಟಿದ್ದಾರೆ.

ಈ ಸಂದರ್ಭದಲ್ಲಿ ʻಮೆಗಾ 154ʼ ಚಿತ್ರದ ಬಗ್ಗೆ ಮಾತನಾಡಿದ ಚಿರಂಜೀವಿ, ಮುಂದೆ ಬಾಬಿ ಸಿನಿಮಾ ಬರಲಿದೆ. ಗಾಡ್ ಫಾದರ್ ನಲ್ಲಿ ನನ್ನ ಪಾತ್ರ ತೀರಾ ಸೈಲೆಂಟ್ ಆಗಿದ್ದರೆ, ಬಾಬಿ ಚಿತ್ರದಲ್ಲಿ ತುಂಬಾ ಲವಲವಿಕೆಯಿಂದ ಇರುತ್ತೇನೆ. ನನ್ನ ಕಾಲುಗಳಿಗೆ ತುಂಬಾ ಕೆಲಸ ಕೊಟ್ಟಿದ್ದಾರೆ. ಇದೊಂದು ರೌಡಿ ಅಳಿಯನ ಸಿನಿಮಾ ಆಗಿದ್ದು, ಬಹಳಷ್ಟು ವಿನೋದವಿದೆ ನನ್ನ ಹಳೆಯ ಸಿನಿಮಾಗಳಂತೆ ಎಲ್ಲರಿಗೂ ಇಷ್ಟವಾಗುವಂತೆಯೇ ಇರಲಿದೆ ಎಂದರು.

ಮೆಗಾ 154 ಸಿನಿಮಾದ ಬಗ್ಗೆ ಚಿರಂಜೀವಿ ಹೇಳಿರುವುದನ್ನು ನೋಡಿದರೆ ಇದೊಂದು ಪ್ಯೂರ್ ಕಮರ್ಷಿಯಲ್ ಸಿನಿಮಾ, ಫುಲ್ ಕಾಮಿಡಿ, ಡ್ಯಾನ್ಸ್ ಬರಲಿವೆ ಎಂಬುದು ಸ್ಪಷ್ಟವಾಗಿದೆ. ಇದರೊಂದಿಗೆ ಚಿತ್ರದ ಮೇಲಿನ ನಿರೀಕ್ಷೆಗಳು ಈಗಾಗಲೇ ಹೆಚ್ಚಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!