Sunday, December 10, 2023

Latest Posts

HEALTH | ರಾಜ್ಯದಲ್ಲಿ ಚಳಿಯೋ ಚಳಿ, ಮಕ್ಕಳ ಆರೈಕೆಗೆ ಸ್ಪೆಶಲ್ ಟಿಪ್ಸ್..

ಚಳಿಗಾಲ ಬಂದರೆ ಸಾಕು ಮಕ್ಕಳಿಗೆ ಶೀತ, ನೆಗಡಿ, ಕೆಮ್ಮು ಬಾಧಿಸುತ್ತದೆ.ಎಷ್ಟೇ ಪ್ರಯತ್ನಪಟ್ಟರೂ ಮಕ್ಕಳನ್ನು ವೈರಸ್‌ಗಳಿಂದ ದೂರ ಇಡುವುದು ಕಷ್ಟದ ಕೆಲಸವೇ. ಆದರೆ ಮಕ್ಕಳ ಆರೋಗ್ಯ ವೃದ್ಧಿಗೆ ಈ ಟಿಪ್ಸ್ ಸಹಾಯವಾದೀತು..

  • ಮನೆಯಲ್ಲಿ ಯಾರಿಗಾದರೂ ಅನಾರೋಗ್ಯ ಕಾಡಿದ್ದರೆ ಮಕ್ಕಳನ್ನು ಅವರಿಂದ ದೂರವಿಡಿ.
  • ವರ್ಷಕ್ಕೊಮ್ಮೆ ಫ್ಲೂ ಇಂಜೆಕ್ಷನ್ ಕೊಡಿಸಿ
  • ನೀವು ಅಥವಾ ಮನೆಯಲ್ಲಿ ಇನ್ಯಾರೋ ಆಸ್ಪತ್ರೆಗೆ ಹೋಗಬೇಕು ಎಂದಾದರೆ ಮಕ್ಕಳನ್ನು ಮನೆಯಲ್ಲೇ ಬಿಟ್ಟು ಹೋಗಿ
  • ಮಕ್ಕಳಿಗೆ ವಾಟರ್ ಬಾಟಲಿ ನೀಡಿ, ಯಾವೆಂದರೆ ಆ ನೀರನ್ನು ಕುಡಿಯಲು ಬಿಡಬೇಡಿ.
  • ಕೈ ತೊಳೆಯುವ ಸರಿಯಾದ ವಿಧಾನವನ್ನು ಕಲಿಸಿ
  • ಆಕ್ಷಿ ಬಂದಾಗ ಕರ್ಚೀಫ್ ಅಡ್ಡ ಇಟ್ಟುಕೊಳ್ಳುವುದು, ತಕ್ಷಣ ಕೈ ತೊಳೆಯುವ ಅಭ್ಯಾಸ ಮಾಡಿಸಿ.
  • ಬೆಚ್ಚಗಿನ ಬಟ್ಟೆ, ಬೆಚ್ಚಗಿನ ಆಹಾರ ಕಡ್ಡಾಯ
  • ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪಾನೀಯಗಳು, ತರಕಾರಿಗಳಿಗೆ ಆದ್ಯತೆ ನೀಡಿ.
  • ಬೆಳಗಿನ ಜಾವ ಹಾಗೂ ಕತ್ತಲಾದ ಮೇಲೆ ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗಬೇಡಿ.
  • ಮಲಗುವಾಗ ಸಾಕ್ಸ್ ಧರಿಸಿ

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!