ಮಕ್ಕಳ ಚಾಕೋಲೆಟ್ ತಿನ್ನುವ ಅಭ್ಯಾಸ ಪೋಷಕರಿಗೆ ತಲೆನೋವಾಗಿ ಪರಿಣಮಿಸುತ್ತದೆ. ತಾಯಂದಿರು ಎಷ್ಟೇ ಕಂಟ್ರೋಲ್ ಮಾಡಿದರೂ ಇನ್ಯಾವುದೋ ಮೂಲದಿಂದ ಮಕ್ಕಳ ಕೈಗೆ ಚಾಕೋಲೆಟ್ ಸಿಕ್ಕುಬಿಡುತ್ತದೆ. ಈ ಅಭ್ಯಾಸ ಬಿಡಿಸೋದು ಹೇಗೆ? ಸಾಧ್ಯವಾದರೆ ಸಂಪೂರ್ಣವಾಗಿ ಚಾಕೋಲೆಟ್ ಅಭ್ಯಾಸ ಬಿಡಿಸಿ, ಆಗದಿದ್ದರೆ ಹೀಗೆ ಲಿಮಿಟ್ ಮಾಡಿ..
ಸಾಕು ಎನ್ನುವಷ್ಟು ಕೊಟ್ಟುಬಿಡಿ
ಹೌದು, ಒಂದು ದಿನ ಮಕ್ಕಳು ಸಾಕು ಎನಿಸುವಷ್ಟು ಚಾಕೋಲೆಟ್ ಕೊಟ್ಟುಬಿಡಿ. ನಮ್ಮ ಮಗು ಹಾಗಲ್ಲ, ಕೊಟ್ರೆ ಇಡೀ ಚಾಕೋಲೆಟ್ ತಿಂದು ಮತ್ತೆ ಬೇಕು ಎಂದು ಹೇಳುತ್ತದೆ ಅಂತೀರಾ? ಇದು ನಿಮ್ಮ ನಂಬಿಕೆ ಅಷ್ಟೆ ಇರಬಹುದಲ್ವಾ? ಒಂದು ಬಾರಿ ಕೊಟ್ಟುಬಿಡಿ ನೋಡೋಣ ಏನಾಗುತ್ತದೆ ಅಂತ. ಚಾಕೋಲೆಟ್ ನೀವು ತಿನ್ನಬೇಡ ಅನ್ನೋದ್ರಿಂದ ಅನ್ನು ತಿನ್ನಬೇಕು ಅಂತ ಆಸೆ ಹೆಚ್ಚಾಗುತ್ತದೆ. ಒಂದು ಬಾರಿ ಆಸೆ ತೀರಿದರೆ ಅದರ ಮೇಲೆ ಆಸಕ್ತಿ ಕಡಿಮೆ ಆಗುತ್ತದೆ.
ಕೆಟ್ಟ ಫುಡ್ ಒಳ್ಳೆ ಫುಡ್ ಅಂತಿಲ್ಲ
ಮಕ್ಕಳೆದುರು ಕೆಟ್ಟ ಫುಡ್, ಒಳ್ಳೆ ಫುಡ್ ಎಂದೆಲ್ಲಾ ಮಾತನಾಡಬೇಡಿ. ಊಟ ಕೆಟ್ಟದ್ದು ಒಳ್ಳೆಯದು ಎಂದು ನೀವೇ ಹೇಳಿಕೊಡಬೇಡಿ. ತಿನ್ನುವ ವಸ್ತುಗಳೆಲ್ಲ ಊಟ ಅಷ್ಟೆ. ಡಿವೈಡ್ ಮಾಡಬೇಡಿ. ಅವರಿಗೆ ಊಟ ತಿಂಡಿ ಮೇಲೂ ಆಸಕ್ತಿ ಹೋಗುತ್ತದೆ. ಬಾಯಿ ಬಿಟ್ಟು ಹೇಳಿ, ಇಂದು ಬಿಸ್ಕೆಟ್ ತಿನ್ನೋಣ, ಇಂದು ಐಸ್ ಕ್ರೀಮ್ ತಿನ್ನೋಣ. ಹೇಳಬಹುದು.
ಇದನ್ನು ತಿನ್ನು ಚಾಕೋಲೆಟ್ ಕೊಡ್ತೀನಿ.
ಈ ರೀತಿ ಹೇಳಬೇಡಿ, ಈ ಊಟ ತಿಂದ್ರೆ ಇನ್ನೊಂದು ಸಿಗುತ್ತದೆ ಅನಿಸೋದೇ ಬೇಡ. ಚನಾಗಿಲ್ಲದಿರೋ ಹಾಗಲಕಾಯಿ ತಿಂದ್ರೆ ಚನಾಗಿರೋ ಚಾಕೋಲೆಟ್ ಕೊಡ್ತಾರೆ ಎಂದು ಮಕ್ಕಳು ಅಂದುಕೊಳ್ತಾರೆ. ಈಗ ಮತ್ತೆ ಚಾಕೋಲೆಟ್ ಸ್ಪೆಷಲ್ ಎಂದುಕೊಳ್ತಾರೆ.
ಊಟದ ಜೊತೆಗೆ ಕೊಟ್ಟುಬಿಡಿ
ಊಟದ ನಂತರ ಡೆಸರ್ಟ್‌ಗೆ ಚಾಕೋಲೆಟ್ ಸಿಗುತ್ತದೆ ಎಂದು ಹೇಳಿದ್ರೆ ಇಡೀ ಊಟವನ್ನು ಕಷ್ಟದಿಂದ, ಅಸಡ್ಡೆಯಿಂದ ಮಾಡುತ್ತಾರೆ. ಆದರೆ ಅದೇ ತಟ್ಟೆಗೆ ಒಂದು ಪೀಸ್ ಚಾಕೊಲೆಟ್ ಇಡಿ. ಇಡೀ ಊಟವನ್ನು ಎಂಜಾಯ್ ಮಾಡುತ್ತಾರೆ.