ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ, ಓರ್ವನ ಸ್ಥಿತಿ ಗಂಭೀರವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಒಎನ್ಜಿಸಿ ಕ್ರಾಸಿಂಗ್ನಲ್ಲಿ ಬೆಳಗಿನ ಜಾವ ಎರಡು ಗಂಟೆ ಸುಮಾರಿಗೆ ಸರಕು ಸಾಗಣೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಕಾರು ಮರಕ್ಕೆ ಹೋಗಿ ಡಿಕ್ಕಿ ಹೊಡೆದು ನಜ್ಜುಗುಜ್ಜಾಗಿದೆ.
ನ್ನೋವಾ ಕಾರು ಬಳ್ಳುಪುರದಿಂದ ಕ್ಯಾಂಟ್ ಪ್ರದೇಶದ ಕಡೆಗೆ ಚಲಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಡಿಕ್ಕಿಯು ಎಷ್ಟು ತೀವ್ರವಾಗಿತ್ತು ಎಂದರೆ ಕಂಟೈನರ್ಗೆ ಡಿಕ್ಕಿಯಾದ ನಂತರ ಕಾರು ತುಂಬಾ ದೂರಕ್ಕೆ ಹಾರಿತ್ತು.
ಘಟನೆ ನಡೆದ ಕೂಡಲೇ ಕ್ಯಾಂಟ್ ಪೊಲೀಸ್ ಠಾಣೆಯ ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗಾಯಗೊಂಡ ಪ್ರಯಾಣಿಕರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಪೈಕಿ ಐದು ಮೃತದೇಹಗಳನ್ನು ಡೂನ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಇನ್ನೊಂದು ಮೃತದೇಹವನ್ನು ಮಹಂತ್ ಇಂದ್ರೇಶ್ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರೆಲ್ಲರೂ ವಿದ್ಯಾರ್ಥಿಗಳು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ನಿವಾಸಿ ತೇಜ್ ಪ್ರಕಾಶ್ ಸಿಂಗ್ (19) ಅವರ ಪುತ್ರಿ ಗುನೀತ್.ಜಸ್ವೀರ್ ಕುಕ್ರೇಜಾ (23) ಅವರ ಪುತ್ರ ಕುನಾಲ್, ಪಲ್ಲವ್ ಗೋಯಲ್ ಅವರ ಮಗಳು ನವ್ಯಾ ಗೋಯಲ್,ಸುನಿಲ್ ಅಗರ್ವಾಲ್ ಮಗ ಅತುಲ್ ಅಗರ್ವಾಲ್,ಕುಮಾರ್ ಅಗರ್ವಾಲ್, ರಿಷಬ್ ಜೈನ್ ಮೃತರು.