Monday, August 8, 2022

Latest Posts

ಪಾಕ್ ಸೇನಾ ಹೆಲಕಾಪ್ಟರ್ ಪತನ: ಲೆಫ್ಟಿನೆಂಟ್ ಜನರಲ್ ಸಹಿತ ಆರು ಸಾವು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಲೂಚಿಸ್ತಾನದ ಸಾಸ್ಸಿ ಪುನ್ನು ದೇವಾಲಯ, ವಿಂದಾರ್ ನಡುವೆ ಪಾಕಿಸ್ತಾನ ಸೇನಾ‌ ಹೆಲಿಕಾಪ್ಟರ್ ಪತನಗೊಂಡಿದೆ.
ಮಂಗಳವಾರ ಸೇನಾ ಅಧಿಕಾರಿಗಳನ್ನು ಕರೆದೊಯ್ಯುತ್ತಿದ್ದ ಈ ಹೆಲಿಕಾಪ್ಟರ್, ಬಲೂಚಿಸ್ತಾನದ ಲಾಸ್ಬೇಲಾ ಪ್ರದೇಶದಲ್ಲಿ ಪ್ರವಾಹ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಗೆ ತೆರಳುತ್ತಿತ್ತು.

ಹೆಲಿಕಾಪ್ಟರ್ ನಲ್ಲಿ ಪಾಕ್ ಸೇನಾಪಡೆಯ ಲೆಫ್ಟಿನೆಂಟ್ ಜನರಲ್ ಸರ್ಫರಾಜ್ ಅಲಿ ಕೂಡಾ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಹೆಲಿಕಾಪ್ಟರ್ ನಲ್ಲಿ ಒಟ್ಟು ಆರು ಮಂದಿ ಪಾಕ್ ಸೇನಾ ಅಧಿಕಾರಿಗಳು ಪ್ರಯಾಣಿಸುತ್ತಿದ್ದು, ಬಹುತೇಕ ಎಲ್ಲರೂ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss