ಕೊರಿಯೋಗ್ರಾಫರ್ ರೆಮೊ ಡಿಸೋಜಾ ಸೋದರ ಸಂಬಂಧಿ ಶವವಾಗಿ ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಸ್ಟಾರ್ ಕೊರೊಯೋಗ್ರಾಫರ್ ರೆಮೊ ಡಿಸೋಜಾ ಅವರ ಸೋದರ ಸಂಬಂಧಿ ಶವ ಪತ್ತೆಯಾಗಿದೆ.
ಸಂಬಂಧಿ ಜೇಸನ್ ಸವಿಯೋ ವಾಟ್ಕಿನ್ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
ಓಶಿವಾರ ಪೊಲೀಸರು ಎಡಿಆರ್ ದಾಖಲಿಸಿದ್ದು, ಜೇಸನ್‌ಗೆ ಗಾಂಜಾ ಚಟ ಇತ್ತು ಎನ್ನುವ ಮಾಹಿತಿ ಹೊರಬಂದಿದೆ.

ತಾಯಿ ಮರಣದ ನಂತರ ಖಿನ್ನತೆಗೆ ಒಳಗಾಗಿದ್ದ ಜೇಸನ್ ಗಾಂಜಾಗೆ ಮೊರೆ ಹೋಗಿದ್ದರು. ಗಾಂಜಾ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ ಎಂದು ಪೊಲೀಸರು ಹೇಳಿದ್ದಾರೆ. ಜೇಸನ್ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಮುಂಬೈನ ಅಂಧೇರಿ ಪಶ್ಚಿಮದ ಯಮುನಾ ನಗರದಲ್ಲಿನ ಫ್ಲಾಟ್ ಒಂದರಲ್ಲಿ ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮುಖ್ಯ ನಿಯಂತ್ರಣ ಕೊಠಡಿಗೆ ಕರೆ ಬಂದಿದೆ. ತಕ್ಷಣ ಪೊಲೀಸರು ಧಾವಿಸಿದ್ದು, ಈತ ರೆಮೊ ಅವರ ಸಂಬಂಧಿ ಎಂದು ತಿಳಿದಿದೆ. ಮುಸುಕು ಹಾಕಿಕೊಂಡು ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!