ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಶಾರುಖ್ ಖಾನ್ ನಟನೆಯ ಬಹುನಿರೀಕ್ಷಿತ ಸಿನಿಮಾ ಜವಾನ್ ಇನ್ನೇನು ಕೆಲವೇ ದಿನಗಳಲ್ಲಿ ತೆರೆಕಾಣಲಿದೆ.
ಪಠಾಣ್ ನಂತರ ಶಾರುಖ್ ಕಮ್‌ಬ್ಯಾಕ್ ಮಾಡಿದ್ದು, ಜವಾನ್ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಈ ಬೆನ್ನಲ್ಲೇ ಜವಾನ್ ಬಗ್ಗೆ ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಹೊರಬಿದ್ದಿದೆ. ಜವಾನ್ ಸಿನಿಮಾದಲ್ಲಿ ಆಕ್ಷನ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ.
ಜವಾನ್ ಸಿನಿಮಾದ ಆಕ್ಷನ್ ಸೀನ್‌ಗಳನ್ನು ಕೊರಿಯೋಗ್ರಫಿ ಮಾಡಿರೋದು ಒಬ್ಬರಲ್ಲಾ ಇಬ್ಬರಲ್ಲಾ, ಬರೋಬ್ಬರಿ ಆರು ಆಕ್ಷನ್ ಕೊರಿಯೊಗ್ರಾಫರ‍್ಸ್. ಹೌದು, ಅಂತಾರಾಷ್ಟ್ರೀಯ ಸ್ಟಂಟ್ ಮಾಸ್ಟರ‍್ಸ್ ಕೂಡ ಇದರಲ್ಲಿದ್ದಾರೆ.
ಸ್ಪೈರೋ ರಾಝಟೋಸ್, ಯಾನಿಕ್ ಬೆನ್, ಕ್ರೇಗ್ ಮೆಕ್ರೆ, ಕೆಚಾ ಕೆಂಪಾಡ್ಕಿ, ಸುನೀಲ್ ರಾಡ್ರಿಗ್ಸ್ ಹಾಗೂ ಅನಲ್ ಅರಸ್ ಜವಾನ್‌ಗೆ ಸ್ಟಂಟ್ ಕೊರಿಯೋಗ್ರಾಫ್ ಮಾಡಿದ್ದಾರೆ.