ಕೇವಲ 72 ಎಸೆತಗಳಲ್ಲಿ 237 ರನ್‌ ಗಳಿಸಿದ ಸ್ಫೋಟಕ ಬ್ಯಾಟರ್‌ ಕ್ರಿಸ್ ಡೆವ್ಲಿಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕ್ರಿಕೆಟ್‌ ನಲ್ಲಿ ಒಂದಲ್ಲ ಒಂದು ಊಹಿಸಲಾಗದ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲವು ಕ್ಯಾಚ್‌ ಗಳು, ಮತ್ತೆ ಕೆಲವು ಬ್ಯಾಟಿಂಗ್‌ ಗಳು. ಈಗ ಅಂತಹದ್ದೇ ಒಂದು ಸ್ಫೋಟಕ ಬ್ಯಾಟಿಂಗ್‌ ವಿಕ್ಟೋರಿಯಾ ಪ್ರೀಮಿಯರ್ ಕ್ರಿಕೆಟ್​ನಲ್ಲಿ ನಡೆದಿದೆ.
ಕೇವಲ 72 ಬಾಲ್ಸ್‌ ನಲ್ಲಿ ಬರೋಬ್ಬರಿ 237 ರನ್‌ ಗಳಿಸುವ ಮೂಲಕ ಕ್ಯಾಂಪರ್​ವೆಲ್ ಮ್ಯಾಗ್​ಪಿಸ್ ತಂಡದ ಮೆಲ್ಬೋರ್ನ್ ಬ್ಯಾಟರ್ ಕ್ರಿಸ್ ಡೆವ್ಲಿಸ್​ ಸ್ಫೋಟಕ ಬ್ಯಾಟಿಂಗ್‌ ಮಾಡಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಕಿಂಗ್​ಸ್ಟೋನ್ ಹಾಥೋರ್ನ್​ ಮತ್ತು ಕ್ಯಾಂಪರ್​ವೆಲ್ ಮ್ಯಾಗ್​ಪಿಸ್‌ ನಡುವಿನ ಪಂದ್ಯದಲ್ಲಿ  ಕ್ರಿಸ್ ಡೆವ್ಲಿಸ್‌ ಅವರು 72 ಎಸೆತಗಳಲ್ಲಿ 20 ಬೌಂಡರಿ, 24 ಸಿಕ್ಸರ್‌ ಬಾರಿಸಿರುವ ಮೂಲಕ ಕ್ರಿಕೆಟ್‌ ಪ್ರೇಮಿಗಳ ಮನಗೆದ್ದಿದ್ದಾರೆ.
ಇವರ ಆಟದಿಂದ ಕ್ಯಾಂಪರ್​ವೆಲ್ ಮ್ಯಾಗ್​ಪಿಸ್ ತಂಡ 50 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 441 ರನ್ ಗಳಿಸಿತು. ಕ್ರಿಸ್ ಅವರ ಈ 237 ರನ್‌ ದಾಖಲೆಯಾಗಿದ್ದು, ವಿಕ್ಟೋರಿಯಾ ಪ್ರೀಮಿಯರ್ ಕ್ರಿಕೆಟ್​ನಲ್ಲಿ ಗಳಿಸಿದ 6ನೇ ಅತಿ ಹೆಚ್ಚು ರನ್‌ ಇವರದ್ದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!