ಕೋವಿಡ್‌ನಿಂದ ಕಂಗಾಲಾಗಿದ್ದ ಕೇರಳಕ್ಕೆ ಬೂಸ್ಟರ್ ಡೋಸ್ ನೀಡಿದ ‘ಕ್ರಿಸ್‌ಮಸ್’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋವಿಡ್ ಮತ್ತಿತರ ಸಮಸ್ಯೆಯಿಂದ ಕಂಗಾಲಾಗಿದ್ದ ಕೇರಳ ಸರ್ಕಾರಕ್ಕೆ ಈ ಬಾರಿಯ ಕ್ರಿಸ್‌ಮಸ್ ಅಲ್ಪ ಮಟ್ಟಿನ ಬೂಸ್ಟರ್ ಡೋಸ್ ನೀಡಿದೆ.
ಈ ಬಾರಿ ಮದ್ಯ ಮಾರಾಟದಿಂದ 229.80 ಕೋಟಿ ರೂ.ಲಾಭ ಉಂಟಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಕ್ರಿಸ್‌ಮಸ್ ಸಂದರ್ಭದ ಮದ್ಯ ಮಾರಾಟದಲ್ಲಿ ಅಲ್ಪ ಪ್ರಮಾಣದ ಕುಸಿತವಾಗಿದ್ದರೂ, ಕೇರಳದ ಆರ್ಥಿಕ ಸ್ಥಿತಿಗೆ ಒಂದಿಷ್ಟು ಚೈತನ್ಯ ತಂದಿಟ್ಟಿದೆ.
ಕ್ರಿಸ್‌ಮಸ್ ಸಂದರ್ಭ ಕೊಲ್ಲಂ ಆಶ್ರಮಮ್ ಔಟ್ಲೆಟ್‌ನಲ್ಲಿ ಅತೀ ಹೆಚ್ಚು ಮದ್ಯ ಮಾರಾಟವಾಗಿದ್ದರೆ ಎರಡನೇ ಎರಡನೇ ಸ್ಥಾನ ತಿರುವನಂತಪುರಂ ಪವರ್‍ಹೌಸ್ ಔಟ್‌ಲೆಟ್‌ನಲ್ಲಿದೆ. ಇನ್ನು ತೃತೀಯ ಸ್ಥಾನವನ್ನು ಇರಿಂಞಲಕುಡ ಔಟ್‌ಲೆಟ್ ಪಡೆದುಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!