ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್: ಕೊಚ್ಚಿಯತ್ತ ಚಿತ್ತನೆಟ್ಟ ಎನ್‌ಐಎ ತಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶವನ್ನೇ ಬೆಚ್ಚಿಬೀಳಿಸಿರುವ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯನ್ನು ಇನ್ನಷ್ಟು ಆಳಕ್ಕಿಳಿಸಿರುವ ಎನ್‌ಐಎ, ಹೆಚ್ಚಿನ ಮಾಹಿತಿ ಕಲೆಹಾಕಲು ಕೇರಳದ ಕೊಚ್ಚಿಯಲ್ಲಿ ಕಾರ್ಯಾಚರಣೆ ಮುಂದುವರಿಸಿದೆ.

ಉಗ್ರ ಶಾರಿಕ್, ಮಂಗಳೂರಿನಲ್ಲಿ ಸ್ಫೋಟವಾಗುವುದಕ್ಕೂ ಮುನ್ನ ಅಲುವಾ ಹಾಗೂ ಮುನಂಬತ್‌ಗೆ ಭೇಟಿ ನೀಡಿದ್ದ. ಅಲ್ಲದೆ ಶಾರಿಕ್ ನಾಲ್ಕು ದಿನ ಆಲುವಾದಲ್ಲಿ ಮತ್ತು ಎರಡು ದಿನ ಮುನಂಬ ಮೀನುಗಾರಿಕಾ ದೋಣಿಯಲ್ಲಿ ತಂಗಿದ್ದ ಎಂಬ ಮಾಹಿತಿ ಈಗಾಗಲೇ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಆತ ಇಲ್ಲಿಂದ ಪಡೆದ ನೆರವು ಪಡೆದಿದ್ದನೇ? ಕೊಚ್ಚಿಯಲ್ಲಿ ಸೋಫಟಕ್ಕೆ ಸಂಚು ರೂಪಿಸಿದ್ದನೇ ಎಂಬ ಬಗ್ಗೆ ವಿದ್ತೃತವಾಗಿ ಮಾಹಿತಿ ಕಲೆಹಾಕಲಾಗುತ್ತಿದೆ.

ಮಂಗಳೂರು ನಗರದ ಹೊರವಲಯ ನಾಗುರಿಯಲ್ಲಿ ರಿಕ್ಷಾವೊಂದರಲ್ಲಿ ಸ್ಫೋಟ ಸಂಭವಿಸಿತ್ತು. ಬಳಿಕದ ತನಿಖೆಯಲ್ಲಿ ಇದೊಂದು ಉಗ್ರ ಚಟುವಟಿಕೆ ಎಂಬುದು ಗೊತ್ತಾಗಿತ್ತು. ಈ ಪ್ರಕರಣದಲ್ಲಿ ಉಗ್ರ ಶಾರೀಕ್‌ನ ಬಂಧನವಾಗಿದ್ದು, ಎನ್‌ಐಎ ತನಿಖೆಯ ಹೊಣೆ ಹೊತ್ತುಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!