ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಪತಿಯಲ್ಲಿ ಚೆಡ್ಡಿ ಗ್ಯಾಂಗ್ ಹಾವಳಿ ಹೆಚ್ಚಾಗಿದೆ. ಮೊನ್ನೆ ರಾತ್ರಿ ಮಾರುತಿ ಶೋರೂಂ, ನಿನ್ನೆ ರಾತ್ರಿ ಶ್ರೀವಾರಿ ವಿಲ್ಲಾಸ್ ನಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಚೆರ್ಲೋಪಲ್ಲಿಯ ಶ್ರೀವಾರಿ ವಿಲ್ಲಾಸ್ ನಂ.31ರಲ್ಲಿ ಚೆಡ್ಡಿ ಗ್ಯಾಂಗ್ ಕಳ್ಳತನ ಮಾಡಿದೆ. ಗ್ರಾಮದ ಹೊರವಲಯದಲ್ಲಿರುವ ಮನೆಗಳನ್ನೇ ಟಾರ್ಗೆಟ್ ಮಾಡಿ ಚೆಡ್ಡಿ ಗ್ಯಾಂಗ್ ದರೋಡೆಗೆ ಯತ್ನಿಸುತ್ತಿದ್ದಾರೆ.
ಶುಕ್ರವಾರ ಮಧ್ಯರಾತ್ರಿ 1.30ರ ಸುಮಾರಿಗೆ ಚೆಡ್ಡಿ ಗ್ಯಾಂಗ್‌ನ ಮೂವರು ಮಾರುತಿ ಶೋರೂಂ ಹಿಂಬಾಗಿಲು ಮುರಿದು ಒಳ ನುಗ್ಗಿದ್ದಾರೆ. ಕೈಯಲ್ಲಿ ರಾಡ್ ಮತ್ತು ಆಯುಧಗಳನ್ನು ಹಿಡಿದುಕೊಂಡು ಶೋರೂಂನ ಹಿಂದೆ ಮುಂದೆ ಕಾವಲು ಕಾದಿರುವ ದೃಶ್ಯಗಳು ಶೋರೂಂನ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿವೆ.
ಆದರೆ ಶೋರೂಂನಲ್ಲಿ ಬೆಲೆಬಾಳುವ ವಸ್ತು ಸಿಗದ ಹಿನ್ನೆಲೆಯಲ್ಲಿ ಚೆಡ್ಡಿಗ್ಯಾಂಗ್ ಹಿಂತಿರುಗಿದ್ದಾರೆ. ತಿರುಪತಿ ಅಲಿಪಿರಿ ಪೊಲೀಸರು ಚೆಡ್ಡಿಗ್ಯಾಂಗ್ ದರೋಡೆಕೋರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಜಿಲ್ಲಾ ಎಸ್ಪಿ ಪರಮೇಶ್ವರ ರೆಡ್ಡಿ ಜಿಲ್ಲಾ ಪೊಲೀಸರನ್ನೂ ಎಚ್ಚರಿಸಿದ್ದಾರೆ. ಗ್ಯಾಂಗ್‌ನ ಚಲನವಲನಗಳನ್ನು ವೀಕ್ಷಿಸಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸುತ್ತಿದ್ದಾರೆ. ಚೆಡ್ಡಿ ಗ್ಯಾಂಗ್ ನಗರ ಪ್ರವೇಶಿಸುವ ಹಿನ್ನೆಲೆಯಲ್ಲಿ ಜನರು ಜಾಗೃತರಾಗುವಂತೆ ಎಚ್ಚರಿಕೆ ಕೊಟ್ಟಿದ್ದಾರೆ.