RECIPE| ಕಜ್ಜಾಯದೊಂದಿಗೆ ಈ ದೀಪಾವಳಿಯನ್ನು ವಿಶೇಷವಾಗಿ ಆಚರಿಸಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೀಪಾವಳಿ ಹಬ್ಬಕ್ಕೆ ಸಾಂಪ್ರದಾಯಿಕ ಸಿಹಿತಿನಿಸೆಂದರೆ ಕಜ್ಜಾಯ. ಪುಟ್ಟ ಮಕ್ಕಳಿಂದ ಹಿರಿಯವರೆಗೆ ಎಲ್ಲರಿಗೂ ಕಜ್ಜಾಯ ಪ್ರಿಯ ಈ ಬಾರಿ ದೀಪಾವಳಿಗೆ ನಿಮ್ಮ ಪಾಕದಲ್ಲಿ ಕಜ್ಜಾಯವೂ ಇರಲಿ..

ಬೇಕಾಗುವ ಪದಾರ್ಥಗಳು 

ಅಕ್ಕಿ – 1 ಕಪ್, ಬೆಲ್ಲ – ¾ ಕಪ್, ಏಲಕ್ಕಿ ಪುಡಿ- ಸ್ವಲ್ಪ, ಗಸಗಸೆ- 1 ಚಮಚ, ಬಿಳಿ ಎಳ್ಳು- ಸ್ವಲ್ಪ, ಎಣ್ಣೆ- ಕರಿಯಲು, ಹಸಿ ತೆಂಗಿನಕಾಯಿ-ಅರ್ಧ ಕಪ್‌

ಮಾಡುವ ವಿಧಾನ

ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು ರಾತ್ರಿಯಿಡೀ ನೆನೆಸಿಟ್ಟು, ಒಂದು ಬಟ್ಟೆಯ ಮೇಲೆ ಹರಡಿ. ತೇವಾಂಶವೆಲಾ ಹೋಗಿ ಉದುರು ಉದುರು ಅನಿಸುವವರೆಗೆ ನೆರಳಲ್ಲೇ ಒಣಗಿಸಬೇಕು. ನಂತರ ಅದನ್ನು ಒಂದು ಮಿಕ್ಸಿಜಾರಿನಲ್ಲಿ ಹಾಕಿ ಹಿಟ್ಟನ್ನಾಗಿ ಪರಿವರ್ತಿಸಿ. ಹಿಟ್ಟನ್ನು ಜರಡಿ ಹಿಡಿದು ನುಣ್ಣನೆಯ ಅಕ್ಕಿ ಹಿಟ್ಟನ್ನು ತೆಗೆಯಿರಿ.

ನಂತರ ಒಂದು ಪಾತ್ರೆಯಲ್ಲಿ ಬೆಲ್ಲ ಹಾಕಿ ಸ್ವಲ್ಪ ನೀರು ಚುಮುಕಿಸಿ ಪಾಕ ತೆಗೆಯಿರಿ. ಈಗ ಇದಕ್ಕೆ ಏಲಕ್ಕಿ ಪುಡಿ, ಗಸಗಸೆ ಹಾಕಿ ತಿರುವಿ. ಪಾಕ ಅಂಟು ಬಂದ ಬಳಿಕ ಅಕ್ಕಿ ಹಿಟ್ಟನ್ನು ಹಾಕಿ ತಳ ಹಿಡಿಯದಂತೆ ತಿರುವುತ್ತಲೇ ಇರಿ. ರಾಗಿ ಮುದ್ದೆಯಂತೆ ಹದ ಬಂದ ಬಳಿಕ ಕೆಳಗಿಳಿಸಿ ತಣಿಯಲು ಬಿಡಿ. ತಣಿದ ಬಳಿಕ ಅಗಲವಾಗಿ ತಟ್ಟಿ ಅದರ ಮೇಲೆ ಎಳ್ಳು ಉದುರಿಸಿಟ್ಟುಕೊಳ್ಳಿ.

ಬಾಣಲೆಗೆ ಎಣ್ಣೆಯಿಟ್ಟು ಕಾದ ಬಳಿಕ ಮಾಡಿಟ್ಟುಕೊಂಡ ಕಜ್ಜಾಯದ ಎಲೆಗಳನ್ನು ಎಣ್ಣೆಯಲ್ಲಿ ಹಾಕಿ ಕರಿದರೆ ಕಜ್ಜಾಯ ರೆಡಿ.

ಇನ್ನೊಂದು ವಿಧಾನ: ಪಾಕಕ್ಕೆ ಹಸಿ ತೆಂಗಿನಕಾಯಿಯ ಹಾಲನ್ನು ಹಾಕಿ ಮಾಡಿದರೆ ಇನ್ನೂ ರುಚಿ. ಪಾಕ ತೆಗೆಯುವಾಗಲೇ ತೆಂಗಿನಕಾಯಿ ಹಾಲು ಸೇರಿಸಿ ಪಾಕ ತೆಗೆಯುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!