ಪ್ರಧಾನಿ ಮೋದಿ ವಿಶ್ವವನ್ನು ಅಣ್ವಸ್ತ್ರ ದುರಂತದಿಂದ ರಕ್ಷಿಸಿದ್ದಾರೆ: ಅಮೆರಿಕ ಸಿಐಎ ಮುಖ್ಯಸ್ಥ ಮೆಚ್ಚುಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದು ಉಕ್ರೇನ್ ಯುದ್ಧದ ನಡುವೆ ರಷ್ಯನ್ನರ ಮೇಲೆ ಪ್ರಭಾವ ಬೀರಿದೆ. ಇದರಿಂದಾಗಿ ರಷ್ಯಾ ಅಣ್ವಸ್ತ್ರ ಬಳಕೆಯಿಂದ ಹಿಂದೆ ಸರಿದಿದೆ. ಈ ಮೂಲಕ ಪ್ರಧಾನಿ ಮೋದಿ ವಿಶ್ವದ ಜನರನ್ನು ಅಣ್ವಸ್ತ್ರ ದುರಂತದಿಂದ ರಕ್ಷಿಸಿದ್ದಾರೆ ಎಂದು ಅಮೆರಿಕ ಕೇಂದ್ರೀಯ ಗುಪ್ತಚರ ಸಂಸ್ಥೆ (ಸಿಐಎ) ಮುಖ್ಯಸ್ಥ ವಿಲಿಯಂ ಬರ್ನ್ಸ್ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
“ಭಾರತ ಪ್ರಧಾನಿ ಮೋದಿ ಅವರು ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿರುವುದು ತುಂಬಾ ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ. ಅವರು ಹೇಳಿದ್ದರಿಂದ ಅದು ಖಂಡಿತವಾಗಿಯೂ ರಷ್ಯನ್ನರ ಮೇಲೆ  ಪರಿಣಾಮ ಬೀರಿದೆ” ಎಂದು ವಿಲಿಯಂ ಬರ್ನ್ಸ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್‌ ಪ್ರತಿರೋಧದಿಂದ ಕುಪಿತರಾಗಿ ಪರಮಾಣು ಯುದ್ಧದ ಬೆದರಿಕೆ ಹಾಕಿದ್ದರು.  ಭಾರತ, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಈ ಹೇಳಿಕೆ ಕುರಿತು ಕಳವಳ ವ್ಯಕ್ತಪಡಿಸಿದ್ದವು. ಯುದ್ಧತಂತ್ರದ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ರಷ್ಯಾದ ಯೋಜನೆಗಳ ಬಗ್ಗೆ ಇದೀಗ ಯಾವುದೇ ಸ್ಪಷ್ಟವಾದ ಪುರಾವೆಗಳು ಕಾಣುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!