ಸಂಸತ್‌ನಲ್ಲಿ ಇಂದು ಸಿರಿಧಾನ್ಯ ಆಹಾರ ಉತ್ಸವ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ 2023 ಆಚರಣೆಗಾಗಿ ಕೇಂದ್ರ ಇಂದು ಸಂಸತ್‌ನಲ್ಲಿ ಸಿರಿಧಾನ್ಯ ಆಹಾರ ಉತ್ಸವ ಆಯೋಜಿಸಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆ 75ನೇ ಅಧಿವೇಶನದಲ್ಲಿ 2023ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಿಸಿತ್ತು. ಪ್ರಧಾನಿ ಮೋದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಭಾರತೀಯ ಸಿರಿಧಾನ್ಯಗಳಿಂದ ತಯಾರಾದ ಬಗೆಬಗೆಯ ಖಾದ್ಯವನ್ನು ಬಾಣಸಿಗರು ತಯಾರಿಸಲಿದ್ದಾರೆ. ಸಿರಿಧಾನ್ಯಗಳು ಆರೋಗ್ಯಕರವಾಗಿದ್ದು, ಇಂದು ಸಚಿವರು ಸಿರಿಧಾನ್ಯಗಳ ಖಾದ್ಯಗಳನ್ನು ಸವಿಯಲಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದ್ದ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ 2023ನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಂಗೀಕರಿಸಿತ್ತು. 2023 ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!