ʼಸಿಐಡಿʼ ಧಾರಾವಾಹಿ ನಟ ದಿನೇಶ್ ಫಡ್ನಿಸ್ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹಿಂದಿಯ ಜನಪ್ರಿಯ ಧಾರಾವಾಹಿ ʼಸಿಐಡಿʼಯ ನಟ ದಿನೇಶ್‌ ಫಡ್ನಿಸ್‌ (57) ಮಂಗಳವಾರ ನಿಧನರಾಗಿದ್ದಾರೆ.

ಕೆಲವು ದಿನಗಳಿಂದ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಮುಂಬೈನ ತುಂಗಾ ಆಸ್ಪತ್ರೆಯ ಐಸಿಯುನಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದರು. ಇದೀಗ ಅವರು ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಹಿಂದೆ, ನಟ ಹೃದಯಾಘಾತದಿಂದ ಬಳಲುತ್ತಿದ್ದರು ಮತ್ತು ಮುಂಬೈನ ತುಂಗಾ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ ಎಂದು ವರದಿಯಾಗಿತ್ತು.

ಅಪರಾಧ ತನಿಖಾ ಧಾರಾವಾಹಿ ಸಿಐಡಿಯಲ್ಲಿ ಫ್ರೆಡ್ರಿಕ್ಸ್ ಪಾತ್ರವನ್ನು ನಟ ದಿನೇಶ್ ಫಡ್ನಿಸ್ ನಿರ್ವಹಿಸಿದ್ದರು. ಅದಾಗ್ಯೂ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯರಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!