ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಸ್ನೇಹಿತ್ ಧಾರಾವಾಹಿಗಳಿಗಿಂತ ಬಿಗ್‌ಬಾಸ್‌ನಿಂದಾಗಿ ಜನರಿಗೆ ಹೆಚ್ಚು ಪರಿಚಿತರಾಗಿದ್ದಾರೆ. ಬಿಗ್‌ಬಾಸ್‌ನಲ್ಲಿ ನಮ್ರತಾ ಜೊತೆ ಲವರ್ ಬಾಯ್ ರೀತಿ ಕಾಣಿಸಿಕೊಂಡಿದ್ದ ಸ್ನೇಹಿತ್ ಶೋ ಮುಗಿದ ನಂತರ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಂಡಿಲ್ಲ.
ಇದೀಗ ಸ್ನೇಹಿತ್ ಸಾಮಾಜಿಕ ಜಾಲತಾಣದಿಂದ ದೂರ ಉಳಿಯೋದಕ್ಕೆ ನಿರ್ಧಾರ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪರ್ಸನಲ್ ಲೈಫ್ ಡಿಸ್ಪ್ಲೇಗೆ ಇಡಬೇಕಾಗುತ್ತದೆ. ನನಗೆ ಅದು ಇಷ್ಟ ಇಲ್ಲ. ಜನ ನಾನು ಮಾಡುವ ಪಾತ್ರದಿಂದ ನನ್ನನ್ನು ಇಷ್ಟಪಡಲಿ ಎಂದಿದ್ದಾರೆ.
ನನ್ನ ಪಾತ್ರಗಳ ಜೊತೆ ಜನ ಕನೆಕ್ಟ್ ಆಗಬೇಕು. ಹಾಗೆ ಮಾಡಬೇಕು ಎಂದರೆ ನನ್ನ ಪರ್ಸನಲ್ ಲೈಫ್ ಗೌಪ್ಯವಾಗಿ ಇರಬೇಕು. ಪಾತ್ರಗಳ ಮೂಲಕನ ಜನರನ್ನು ರಂಜಿಸುತ್ತೇನೆ. ದೊಡ್ಡ ಹೀರೋ ಆಗುತ್ತೇನೆ ಎಂದು ಹೇಳಿಕೊಂಡಿದ್ದಾರೆ.