September 11, 2026
Friday, September 11, 2026
spot_img

CINE | ಸಿನಿಮಾ ಗೆಲ್ಲೋದು ಕಥೆಯಿಂದ, ಕೇವಲ ಹೀರೋ-ಹೀರೋಯಿನ್ ವಯಸ್ಸಿನಿಂದಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗೆ ಬಾಲಿವುಡ್‌ನಿಂದ ಹಿಡಿದು ಸ್ಯಾಂಡಲ್‌ವುಡ್‌ವರೆಗೆ ಒಂದೇ ಚರ್ಚೆ ಓಡ್ತಿದೆ ಅದೇನಪ್ಪಾ ಅಂದ್ರೆ, ಸಿನಿಮಾಗೆ ಕಥೆ ಮುಖ್ಯನಾ ಅಥವಾ ಹೀರೋ-ಹೀರೋಯಿನ್ ಮುಖ್ಯನಾ?. ಈ ವಿಷ್ಯದ ಬಗ್ಗೆ ಮೇಘನಾ ಗುಲ್ಜಾರ್ ನಿರ್ದೇಶನದ ‘ದಾಯರಾ’ ಸಿನಿಮಾ ಟೀಮ್ ಇಂಟ್ರೆಸ್ಟಿಂಗ್ ಮಾತುಗಳನ್ನಾಡಿದೆ. ಕರೀನಾ ಕಪೂರ್, ಪೃಥ್ವಿರಾಜ್ ಸುಕುಮಾರನ್ ಮತ್ತು ಮೇಘನಾ ಮೂವರೂ ಸೇರಿ, ಇವತ್ತಿನ ಸಿನಿಮಾ ವೀಕ್ಷಕರು ಎಷ್ಟು ಸ್ಮಾರ್ಟ್ ಆಗಿದ್ದಾರೆ ಅನ್ನೋದನ್ನ ಓಪನ್ ಆಗಿ ಹೇಳಿದ್ದಾರೆ.

ಇವತ್ತಿನ ಆಡಿಯನ್ಸ್ ಮುಂಚಿನ ತರ ಅಲ್ಲ. ಸೋಶಿಯಲ್ ಮೀಡಿಯಾ, ಒಟಿಟಿ ಎಂದು ಪ್ರಪಂಚದಾದ್ಯಂತ ಸಿನಿಮಾ ನೋಡಿ ಪಳಗಿರೋ ಇವತ್ತಿನ ಜನರಿಗೆ ಯಾವುದು ಕೆಟ್ಟ ಕಥೆ, ಯಾವುದು ಒಳ್ಳೆ ಕಥೆ ಎಂದು ಕಣ್ಣು ಮುಚ್ಚಿ ಹೇಳೋ ಅಷ್ಟು ಜ್ಞಾನ ಬಂದಿದೆ. ಹೀಗಿದ್ದಾಗ, “ಸ್ಟಾರ್ ಇದ್ದಾರೆ, ರೊಮ್ಯಾನ್ಸ್ ಇದೆ, ನಾಲಕ್ಕು ಹಾಡಿದೆ” ಎಂದು ಹಳೇ ಕಾನ್ಸೆಪ್ಟ್ ಇಟ್ಕೊಂಡು ಬಂದ್ರೆ ಜನ ಥಿಯೇಟರ್ ಕಡೆ ಮುಖ ಕೂಡ ಮಾಡಲ್ಲ. ಇದನ್ನೇ ಕರೀನಾ ಕಪೂರ್ ಕೂಡ ಹೇಳಿರೋದು. “ಇವತ್ತಿನ ಆಡಿಯನ್ಸ್ ನಾವು ಅನ್ಕೊಂಡಿರೋದಕ್ಕಿಂತ ತುಂಬಾ ಸ್ಮಾರ್ಟ್ ಇದ್ದಾರೆ. ಪ್ರೊಡ್ಯೂಸರ್‌ಗಳು ಇನ್ನು ಹಳೇ ಮೈಂಡ್‌ಸೆಟ್‌ನಲ್ಲೇ ಇದ್ದಾರೆ,” ಎಂದು ಬೋಲ್ಡ್ ಆಗಿ ಹೇಳಿದ್ದಾರೆ.

ಯಂಗ್ ಹೀರೋ ಮತ್ತು ಹೀರೋಯಿನ್ ಇಟ್ಟರೆ ಮಾತ್ರ ಸಿನಿಮಾ ಓಡುತ್ತೆ ಅನ್ನೋದು ಪ್ರೊಡ್ಯೂಸರ್‌ಗಳ ದೊಡ್ಡ ಭ್ರಮೆ. ಆದರೆ ವಿಷಯ ಅದಲ್ಲ, ಜನರಿಗೆ ಬೇಕಿರೋದು ಗಟ್ಟಿಯಾದ ಬರವಣಿಗೆ. ಮೇಘನಾ ಗುಲ್ಜಾರ್ ಹೇಳೋ ಪ್ರಕಾರ, ರೈಟರ್ಸ್ ಹೊಸ ರೀತಿಯ ಕಥೆ ಬರೆಯೋಕೆ ರೆಡಿ ಇದ್ದಾರೆ, ಆದರೆ ಅವರಿಗೆ ನಟರು ಮತ್ತು ಪ್ರೊಡ್ಯೂಸರ್‌ಗಳ ಸಪೋರ್ಟ್ ಸಿಗಬೇಕು. ಸಿನಿಮಾ ಅನ್ನೋದು ಒಬ್ಬರ ಕೆಲಸ ಅಲ್ಲ, ಅದೊಂದು ಟೀಮ್ ವರ್ಕ್. ಒಳ್ಳೆ ಕಥೆಗೆ ಬಂಡವಾಳ ಹೂಡೋ ಧೈರ್ಯ ನಿರ್ಮಾಪಕರಿಗೆ ಇರಬೇಕು.

ಇದಕ್ಕೆ ಸೂಪರ್ ಎಕ್ಸಾಂಪಲ್ ಕೊಟ್ಟಿದ್ದು ಮಲಯಾಳಂ ನಟ ಪೃಥ್ವಿರಾಜ್. “ಒಂದು ವೇಳೆ ಸಂಜಯ್ ಲೀಲಾ ಭನ್ಸಾಲಿ ಅವರು ಅಮಿತಾಬ್ ಬಚ್ಚನ್ ಮತ್ತು ರೇಖಾ ಅವರನ್ನ ಇಟ್ಕೊಂಡು ಸಿನಿಮಾ ಮಾಡಿದ್ರೆ, ನಾನು ಫಸ್ಟ್ ಡೇ ಫಸ್ಟ್ ಶೋನೇ ನೋಡ್ತೀನಿ,” ಅಂದ್ರು. ಅಂದ್ರೆ, ವಯಸ್ಸು ಅಥವಾ ಗ್ಲಾಮರ್ ಮುಖ್ಯ ಅಲ್ಲ, ಒಳ್ಳೆ ಡೈರೆಕ್ಟರ್ ಜೊತೆ ಒಳ್ಳೆ ಪರ್ಫಾರ್ಮರ್ ಹಾಗೂ ಎಂಟರ್‌ಟೈನಿಂಗ್ ಕಥೆ ಇದ್ರೆ ಜನ ಖಂಡಿತ ನೋಡೇ ನೋಡ್ತಾರೆ ಅನ್ನೋದು ಸರಳ ಸತ್ಯ.

ಒಟ್ಟಿನಲ್ಲಿ, ‘ದಾಯರಾ’ ಸಿನಿಮಾದ ಈ ಮಾತುಗಳು ಇಡೀ ಚಿತ್ರರಂಗಕ್ಕೆ ಕಣ್ಣು ತೆರೆಸುವಂತಿದೆ. ಬರಿ ಸ್ಟಾರ್ ಕಾಂಬಿನೇಷನ್ ನೆಚ್ಚಿಕೊಂಡು ಸಿನಿಮಾ ಮಾಡೋ ಕಾಲ ಮುಗೀತು, ಈಗೇನಿದ್ರೂ ಬರವಣಿಗೆಯೇ ಸಿನಿಮಾದ ನಿಜವಾದ ಹೀರೋ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !