March 27, 2026
Friday, March 27, 2026
spot_img

CINE | ಎ4 ಎಂಟರ್‌ಟೇನ್‌ಮೆಂಟ್ಸ್ ತೆಕ್ಕೆಗೆ ಟಾಕ್ಸಿಕ್: ಕೇರಳದಲ್ಲಿ ಇತಿಹಾಸ ನಿರ್ಮಿಸೋಕೆ ರೆಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಮೇಲೆ ದಿನದಿಂದ ದಿನಕ್ಕೆ ನಿರೀಕ್ಷೆ ಹೆಚ್ಚುತ್ತಿದೆ. ಚಿತ್ರದ ವಿತರಣೆ ಹಕ್ಕುಗಳಿಗಾಗಿ ಹಲವು ಸಂಸ್ಥೆಗಳು ಪೈಪೋಟಿ ನಡೆಸುತ್ತಿದ್ದು, ಕೇರಳದಲ್ಲಿ ಬಿಡುಗಡೆ ಹಕ್ಕನ್ನು ‘ಎ4 ಎಂಟರ್‌ಟೇನ್‌ಮೆಂಟ್ಸ್’ ಪಡೆದುಕೊಂಡಿದೆ.

ಈ ಸಂಸ್ಥೆಯನ್ನು ಸಿ.ವಿ. ಸಾರಥಿ ಮತ್ತು ಮುಕೇಶ್ ಮೆಹ್ತಾ ಮುನ್ನಡೆಸುತ್ತಿದ್ದಾರೆ.

ಈ ಸಂಸ್ಥೆಗೆ ದೊಡ್ಡ ಚಿತ್ರಗಳನ್ನು ಹಂಚಿಕೆ ಮಾಡಿದ ಅನುಭವವಿದೆ. ‘ಪುಷ್ಪ 2’, ‘ಅನಿಮಲ್’, ‘ಲಿಯೋ’, ‘ಅವತಾರ್’ ಮುಂತಾದ ಭಾರೀ ಬಜೆಟ್ ಸಿನಿಮಾಗಳನ್ನು ಯಶಸ್ವಿಯಾಗಿ ವಿತರಿಸಿದ್ದ ಅನುಭವದೊಂದಿಗೆ ‘ಟಾಕ್ಸಿಕ್’ಗೂ ದೊಡ್ಡ ಮಟ್ಟದ ಬಿಡುಗಡೆ ಸಿಗಲಿದೆ ಎನ್ನಲಾಗುತ್ತಿದೆ. ಕೇರಳದಲ್ಲಿ ಮೂರುನೂರು ಐವತ್ತಕ್ಕೂ ಹೆಚ್ಚು ಪರದೆಗಳಲ್ಲಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.

ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನ ಮಾಡಿರುವುದು ಚಿತ್ರಕ್ಕೆ ಹೆಚ್ಚುವರಿ ಆಕರ್ಷಣೆ ತಂದಿದೆ. ಯಶ್ ಹಾಗೂ ಗೀತು ಸೇರಿ ಕಥೆ ರೂಪಿಸಿರುವ ಈ ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಚಿತ್ರೀಕರಿಸಲಾಗಿದೆ. ಬಳಿಕ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಿಗೆ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ‘ಕೆಜಿಎಫ್ 2’ ನಂತರ ಯಶ್ ಅವರ ಮತ್ತೊಂದು ಭಾರೀ ಪ್ರಯತ್ನವೆಂದು ಅಭಿಮಾನಿಗಳು ನಿರೀಕ್ಷೆಯಿಂದ ಕಾಯುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !