April 15, 2026
Wednesday, April 15, 2026
spot_img

CINE | ಜನ್ಮದಿನದಂದೇ ಜಬರ್ದಸ್ತ್ ಗಿಫ್ಟ್ ಕೊಟ್ಟ ‘ಪೆದ್ದಿ’ ಟೀಸರ್: ಬ್ಯಾಟ್ ಹಿಡಿದಿದ್ದ ಕೈಲಿ ಈಗ ಗದೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಾಲಿವುಡ್‌ನ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಇಂದು 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ‘RRR’ ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ಅವರಿಗೆ, ಇತ್ತೀಚಿನ ಚಿತ್ರಗಳಾದ ‘ಆಚಾರ್ಯ’ ಮತ್ತು ‘ಗೇಮ್ ಚೇಂಜರ್’ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟಿವೆ. ಈ ಸಂಭ್ರಮದ ನಡುವೆಯೇ, ಅವರ ಬಹುನಿರೀಕ್ಷಿತ ಚಿತ್ರ ‘ಪೆದ್ದಿ’ಯ ಹೊಸ ಟೀಸರ್ ಇಂದು ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ.

ಹಿಂದಿನ ಟೀಸರ್ ಹಾಗೂ ಪೋಸ್ಟರ್‌ಗಳಲ್ಲಿ ರಾಮ್ ಚರಣ್ ಹಳ್ಳಿಯ ಕ್ರಿಕೆಟ್ ಆಟಗಾರನಾಗಿ ಕಾಣಿಸಿಕೊಂಡಿದ್ದರು. ಆದರೆ, ಇಂದು ಬಿಡುಗಡೆಯಾದ ಟೀಸರ್‌ನಲ್ಲಿ ಅವರು ‘ಪೆದ್ದಿ ಪೆಹಲ್ವಾನ್’ ಆಗಿ ಸಖತ್ ರಗಡ್ ಲುಕ್‌ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಧಾನ್ಯದ ಚೀಲಗಳನ್ನು ಸುಲಭವಾಗಿ ಎತ್ತಿ ಎಸೆಯುವುದು, ಅಖಾಡದಲ್ಲಿ ಕುಸ್ತಿ ಮಾಡುವುದು ಮತ್ತು ಆಂಜನೇಯನ ಗದೆಯಂತಹ ವಸ್ತುವನ್ನು ಲೀಲಾಜಾಲವಾಗಿ ತಿರುಗಿಸುವ ಮೂಲಕ ತಮ್ಮ ದೈಹಿಕ ಶಕ್ತಿಯನ್ನು ಪ್ರದರ್ಶಿಸಿದ್ದಾರೆ.

ಒಂದೆಡೆ ಬ್ಯಾಟ್ ಹಿಡಿದ ಕ್ರಿಕೆಟರ್, ಇನ್ನೊಂದೆಡೆ ಅಖಾಡದ ಕುಸ್ತಿಪಟು! ಈ ವಿಭಿನ್ನ ಶೇಡ್‌ಗಳನ್ನು ನೋಡಿದ ಅಭಿಮಾನಿಗಳಲ್ಲಿ ಈಗ ಹೊಸ ಅನುಮಾನ ಶುರುವಾಗಿದೆ. ಚಿತ್ರದಲ್ಲಿ ರಾಮ್ ಚರಣ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆಯೇ? ಅಥವಾ ಇದು ತಂದೆ-ಮಗನ ಕಥೆಯೇ? ಎಂಬ ಕುತೂಹಲ ಗರಿಗೆದರಿದೆ.

ಮೈತ್ರಿ ಮೂವಿ ಮೇಕರ್ಸ್ ಮತ್ತು ವೃದ್ಧಿ ಸಿನಿಮಾಸ್ ನಿರ್ಮಾಣದ ಈ ಚಿತ್ರವು ಏಪ್ರಿಲ್ 30, 2026 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !