October 15, 2026
Thursday, October 15, 2026
spot_img

CINE | ಆ್ಯಕ್ಷನ್, ಸ್ಟೈಲ್, ಮಾಸ್ ಲುಕ್! ‘ಜನ ನಾಯಗನ್’ ಟೀಸರ್ ಔಟ್: ನೋಡಿದ್ರಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಹಾಗೂ ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅವರ ಬಹುನಿರೀಕ್ಷಿತ ಸಿನಿಮಾ ‘ಜನ ನಾಯಗನ್’ ಬಿಡುಗಡೆಯ ಸಿದ್ಧತೆಯಲ್ಲಿದ್ದು, ಚಿತ್ರತಂಡ ಬಿಡುಗಡೆ ಮಾಡಿರುವ ಹೊಸ ಟೀಸರ್ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.

ಟೀಸರ್‌ನಲ್ಲಿ ವಿಜಯ್ ಮಾಸ್ ಎಂಟ್ರಿ

ಕಿರು ಟೀಸರ್‌ನಲ್ಲಿ ವಿಜಯ್ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಜೈಲು ಕೈದಿಯ ಉಡುಪಿನಿಂದ ನಾಯಕತ್ವದ ಲುಕ್‌ಗೆ ಬದಲಾಗುವ ದೃಶ್ಯ ಅಭಿಮಾನಿಗಳಲ್ಲಿ ಹೆಚ್ಚು ಕುತೂಹಲ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟೀಸರ್ ವೈರಲ್ ಆಗಿದೆ.

ಸವಾಲುಗಳ ಬಳಿಕ ಬಿಡುಗಡೆ

ಚಿತ್ರದ ಬಿಡುಗಡೆ ಹಲವು ಕಾರಣಗಳಿಂದ ಮುಂದೂಡಲ್ಪಟ್ಟಿತ್ತು. ಸೆನ್ಸಾರ್ ಪ್ರಕ್ರಿಯೆ ಹಾಗೂ ಆನ್‌ಲೈನ್ ಲೀಕ್‌ ಸೇರಿದಂತೆ ಕೆಲವು ಅಡೆತಡೆಗಳನ್ನು ದಾಟಿದ ಬಳಿಕ ಇದೀಗ ಚಿತ್ರ ಬಿಡುಗಡೆಯಿಗೆ ಸಜ್ಜಾಗಿದೆ.

ಸ್ಟಾರ್‌ಗಳ ಸಂಗಮ

ಎಚ್. ವಿನೋದ್ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ಜೊತೆಗೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಪ್ರಕಾಶ್ ರಾಜ್, ಪ್ರಿಯಾಮಣಿ, ಗೌತಮ್ ವಾಸುದೇವ್ ಮೆನನ್ ಹಾಗೂ ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಜಕೀಯ ಪ್ರವೇಶದ ಬಳಿಕ ಬಿಡುಗಡೆಯಾಗುತ್ತಿರುವ ವಿಜಯ್ ಅವರ ಮೊದಲ ಸಿನಿಮಾ ಎಂಬ ಕಾರಣಕ್ಕೂ ಚಿತ್ರದ ಮೇಲೆ ಭಾರೀ ನಿರೀಕ್ಷೆ ಮೂಡಿದೆ.

Must Read