ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಲ್ಲಿ ಮದುವೆ ಸೀಸನ್ ಬಹಳ ಜೋರಾಗಿ ನಡೆಯುತ್ತಿದೆ. ಇತ್ತೀಚೆಗೆ ಬಾಲಿವುಡ್ ನಟಿ ರಾಕುಲ್ ಪ್ರೀತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಪ್ರಿಯಾಂಕಾ ಚೋಪ್ರಾ ಸಹೋದರಿ ಮೀರಾ ಚೋಪ್ರಾ ಮದುವೆ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ.
ನಟಿ ಮೀರಾ ಚೋಪ್ರಾ ಮುಂದಿನ ತಿಂಗಳು ವಿವಾಹವಾಗಲಿದ್ದಾರೆ. ಐಷಾರಾಮಿ ವಿವಾಹ ಸಮಾರಂಭವು ಜೈಪುರದಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ. ಜೈಪುರ-ದೆಹಲಿ ಹೆದ್ದಾರಿ ಬಳಿಯ ಐಷಾರಾಮಿ ರೆಸಾರ್ಟ್ನಲ್ಲಿ ನಟಿಯ ವಿವಾಹ ಮತ್ತು ವಿವಾಹಪೂರ್ವ ಆಚರಣೆಗಳು ನಡೆಯಲಿದೆ.
ಮೀರಾ ಚೋಪ್ರಾ ಅವರ ಮದುವೆ ಮಾರ್ಚ್ 11 ಮತ್ತು 12 ರಂದು ನಡೆಯಲಿದ್ದು. ಈ ಮದುವೆಗೆ ವಿಶೇಷ ಅತಿಥಿಗಳನ್ನು ಮಾತ್ರ ಆಹ್ವಾನಿಸಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.