ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದ ಗ್ರೇಟೆಸ್ಟ್ ಡೈರೆಕ್ಟರ್ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದಾರೆ.
ಎಷ್ಟೋ ನಿರ್ದೇಶಕರು ಬರ್ತಾರೆ ಹೋಗ್ತಾರೆ ಆದ್ರೆ ಉಪ್ಪಿ ಎಂದೆಂದಿಗೂ ಇದ್ದಲ್ಲೇ ಇದ್ದಾರೆ. ಅವರನ್ನು ಬೀಟ್ ಮಾಡೋಕೆ ಆಗೋದಿಲ್ಲ, ಯಾಕಂದ್ರೆ ಅವ್ರು ರೇಸ್ನಲ್ಲಿ ಇಲ್ಲ. ಬೇರೆಯೇ ಟ್ರಾಕ್ನಿಂದ ಗುರಿಮುಟ್ಟಿದ್ದಾರೆ.
ಓಂ, ಎ, ಉಪೇಂದ್ರ ಎಲ್ಲವೂ ಒಂದೊಂದು ಜೆಮ್ಗಳು. ಉಪ್ಪಿ ಸಿನಿಮಾಗಳು ಬರೀ ಸಿನಿಮಾ ಅಲ್ಲ ನಮ್ಮ ಬದುಕಿಗೆ ಕನ್ನಡಿ ಆಗಿದೆ. ಉಪ್ಪಿ ಸದಾ ಚಿನ್ನದ ಕುದುರೆ ಮೇಲೆ ಸವಾರಿ ಮಾಡ್ತಿದ್ದಾರೆ. ಮುಂದೆಯೂ ಮಾಡ್ತಾರೆ ಎಂದು ಹೇಳಿದ್ದಾರೆ.