August 4, 2026
Tuesday, August 4, 2026
spot_img

CINE | ಅಕ್ಷಯ್ ಕುಮಾರ್‌ಗೆ ಜೀವದಾನ ನೀಡಿದ ‘ವೆಲ್ಕಮ್ 3’: ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಓಪನಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಕೆಲವು ವರ್ಷಗಳಿಂದ ಸರಣಿ ಸೋಲುಗಳಿಂದ ಕಂಗೆಟ್ಟಿದ್ದ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್, ಕೊನೆಗೂ ಯಶಸ್ಸಿನ ಹಾದಿಗೆ ಮರಳಿದ್ದಾರೆ. ಅವರ ಬಹುನಿರೀಕ್ಷಿತ ಚಿತ್ರ ‘ವೆಲ್ಕಮ್ ಟು ದಿ ಜಂಗಲ್’ (ವೆಲ್ಕಮ್ 3) ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುವ ಮುನ್ಸೂಚನೆ ನೀಡಿದೆ. ಭರ್ಜರಿ ಓಪನಿಂಗ್ ಪಡೆಯುವ ಮೂಲಕ ಅಕ್ಕಿ ಕೆರಿಯರ್‌ಗೆ ಈ ಸಿನಿಮಾ ದೊಡ್ಡ ಮೈಲೇಜ್ ತಂದುಕೊಟ್ಟಿದೆ.

ಮೊದಲ ದಿನದ ಕಲೆಕ್ಷನ್ ವಿವರ

ವಿಶ್ವಾದ್ಯಂತ ಬರೋಬ್ಬರಿ 10,892 ಶೋಗಳನ್ನು ಕಂಡಿರುವ ಈ ಚಿತ್ರ, ಮೊದಲ ದಿನವೇ ಭಾರತದಲ್ಲಿ ₹15.00 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಚಿತ್ರದ ಒಟ್ಟು ಗ್ರಾಸ್ ಗಳಿಕೆ ₹22.50 ಕೋಟಿ ದಾಟಿದ್ದು, ಒಟ್ಟು ನೆಟ್ ಕಲೆಕ್ಷನ್ ₹18.75 ಕೋಟಿಗೆ ತಲುಪಿದೆ. ಇನ್ನು ವಿದೇಶದಲ್ಲೂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ₹6.50 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಚಿತ್ರದ ಮೊದಲ ದಿನದ ಜಾಗತಿಕ (Worldwide) ಒಟ್ಟು ಗಳಿಕೆ ₹29.00 ಕೋಟಿ ತಲುಪಿ ಧೂಳೆಬ್ಬಿಸಿದೆ.

ಮಲ್ಟಿಸ್ಟಾರರ್ ತಾರಾಗಣದ ಬಲ

ಈ ಚಿತ್ರದ ಯಶಸ್ಸಿಗೆ ಕೇವಲ ಅಕ್ಷಯ್ ಕುಮಾರ್ ಮಾತ್ರವಲ್ಲದೆ, ಚಿತ್ರದಲ್ಲಿರುವ ದೊಡ್ಡ ಸ್ಟಾರ್ ದಂಡೇ ಕಾರಣ ಎನ್ನಲಾಗುತ್ತಿದೆ. ಸಂಜಯ್ ದತ್, ಸುನೀಲ್ ಶೆಟ್ಟಿ, ಅರ್ಷದ್ ವಾರ್ಸಿ, ರವೀನಾ ಟಂಡನ್, ಜ್ಯಾಕ್ವೆಲಿನ್ ಫರ್ನಾಂಡಿಸ್ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಪ್ರೇಕ್ಷಕರಿಗೆ ಪಕ್ಕಾ ಕಾಮಿಡಿ ಹಾಗೂ ಮನರಂಜನೆಯ ಹೂರಣ ಉಣಬಡಿಸುತ್ತಿದ್ದಾರೆ. ಮಲ್ಟಿಸ್ಟಾರರ್ ಬಲದಿಂದಾಗಿ ಚಿತ್ರಮಂದಿರಗಳತ್ತ ಜನ ಮುಗಿಬೀಳುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !