October 10, 2026
Saturday, October 10, 2026
spot_img

CINE | 80ರ ದಶಕದ ಬೆಂಗಳೂರು ಅಂಡರ್‌ವಲ್ಡ್ ಝಲಕ್: ‘ಬಲರಾಮನ ದಿನಗಳು’ ಟೀಸರ್ ಔಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆ್ಯಕ್ಷನ್ ಹೀರೋ ಎಂಬ ಇಮೇಜ್ ಹೊಂದಿರುವ ವಿನೋದ್ ಪ್ರಭಾಕರ್ ಇದೀಗ ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಅವರ ಅಭಿನಯದ ಬಲರಾಮನ ದಿನಗಳು ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಿನಿಪ್ರೇಮಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

1980ರ ದಶಕದ ಬೆಂಗಳೂರಿನ ಭೂಗತ ಜಗತ್ತಿನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಕೆ.ಎಂ. ಚೈತನ್ಯ ನಿರ್ದೇಶನ ಮಾಡಿದ್ದಾರೆ. ‘ಆ ದಿನಗಳು’ ಚಿತ್ರದ ಛಾಯೆ ಟೀಸರ್‌ನಲ್ಲಿ ಕಂಡುಬಂದಿದ್ದು, ಗಟ್ಟಿ ಕಥೆ ಮತ್ತು ತೀವ್ರತೆಯ ನಿರೂಪಣೆ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ:

ಈ ಸಿನಿಮಾದಲ್ಲಿ ವಿನೋದ್ ಪ್ರಭಾಕರ್‌ಗೆ ಪ್ರಿಯಾ ಆನಂದ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಆಶಿಷ್ ವಿದ್ಯಾರ್ಥಿ, ಅತುಲ್ ಕುಲಕರ್ಣಿ ಸೇರಿದಂತೆ ಹಲವು ಅನುಭವಿ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

‘ಮಾದೇವ’ ಬಳಿಕ ಮತ್ತೊಂದು ದೊಡ್ಡ ಗೆಲುವಿನ ಭರವಸೆಯೊಂದಿಗೆ ಬರುತ್ತಿರುವ ಈ ಚಿತ್ರ, ಬಿಡುಗಡೆಗೂ ಮುನ್ನವೇ ಟೀಸರ್ ಮೂಲಕ ಸದ್ದು ಮಾಡತೊಡಗಿದೆ.

Must Read