June 9, 2026
Tuesday, June 9, 2026
spot_img

CINE | ರಿಲೀಸ್‌ಗೂ ಮುನ್ನ ಬಿಗ್ ಟ್ವಿಸ್ಟ್: ‘ಲಾಹೋರ್ 1947’ ಶೀರ್ಷಿಕೆ ಚೇಂಜ್; ಏನ್ ಗೊತ್ತಾ ಹೊಸ ಟೈಟಲ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸನ್ನಿ ಡಿಯೋಲ್ ಮತ್ತು ಪ್ರೀತಿ ಜಿಂಟಾ ಅಭಿನಯದ ಸಿನಿಮಾದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ‘ಲಾಹೋರ್ 1947’ ಎಂಬ ಹೆಸರಿನಲ್ಲಿ ಸಿದ್ಧವಾಗುತ್ತಿದ್ದ ಚಿತ್ರಕ್ಕೆ ಇದೀಗ ‘ಬಂಟ್ವಾರಾ 1947’ ಎಂದು ಹೊಸ ಶೀರ್ಷಿಕೆ ನೀಡಲಾಗಿದೆ. ಚಿತ್ರದ ಮೊದಲ ಮೋಷನ್ ಪೋಸ್ಟರ್‌ ಮೂಲಕ ಈ ಘೋಷಣೆ ಮಾಡಲಾಗಿದೆ.

ಹೊಸ ಹೆಸರಿನೊಂದಿಗೆ ಬಿಡುಗಡೆ ದಿನಾಂಕ ಘೋಷಣೆ

ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಸಂತೋಷಿ ನಿರ್ದೇಶನದ ಈ ಚಿತ್ರವನ್ನು ಆಮಿರ್ ಖಾನ್ ನಿರ್ಮಿಸುತ್ತಿದ್ದಾರೆ. ಮೋಷನ್ ಪೋಸ್ಟರ್ ಬಿಡುಗಡೆ ಮಾಡಿರುವ ಸನ್ನಿ ಡಿಯೋಲ್, 2026ರ ಆಗಸ್ಟ್ 14ರಂದು ಸಿನಿಮಾ ತೆರೆಗೆ ಬರಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:

ವಿಭಜನೆಯ ನೋವಿನ ಕಥೆಗೆ ಜೀವ

ಭಾರತ-ಪಾಕಿಸ್ತಾನ ವಿಭಜನೆಯ ಹಿನ್ನೆಲೆಯ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಭಯ, ಹಿಂಸೆ ಮತ್ತು ಮಾನವೀಯ ಭಾವನೆಗಳ ಚಿತ್ರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಪೋಸ್ಟರ್‌ನಲ್ಲಿ ಸನ್ನಿ ಡಿಯೋಲ್, ಪ್ರೀತಿ ಜಿಂಟಾ, ಶಬಾನಾ ಅಜ್ಮಿ ಮತ್ತು ಕರಣ್ ಡಿಯೋಲ್ ಪಾತ್ರಗಳ ಝಲಕ್ ಗಮನ ಸೆಳೆಯುತ್ತಿದೆ.

ಹಳೆಯ ಶೀರ್ಷಿಕೆಗೆ ಹೊಸ ಅಧ್ಯಾಯ

‘ಬಂಟ್ವಾರಾ’ ಎಂಬ ಹೆಸರಿನ ಹಕ್ಕುಗಳನ್ನು ಹಿಂದಿನ ನಿರ್ಮಾಪಕರ ಕುಟುಂಬದಿಂದ ಪಡೆದುಕೊಳ್ಳಲಾಗಿದೆ ಎನ್ನಲಾಗಿದೆ. ಹೆಸರಿನ ಬದಲಾವಣೆಯೊಂದಿಗೆ ಚಿತ್ರದ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಿದ್ದು, ಅಭಿಮಾನಿಗಳು ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !