October 10, 2026
Saturday, October 10, 2026
spot_img

CINE | ಬಾಲಿವುಡ್ ಭಾಯ್‌ಜಾನ್ ಚಿತ್ರಕ್ಕೆ ಗಡಿ ಸಂಘರ್ಷದ ಬಿಸಿ: ‘ಮಾತೃಭೂಮಿ’ ರಿಲೀಸ್ ಸದ್ಯಕ್ಕೆ ಡೌಟು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ಹೈ-ವೋಲ್ಟೇಜ್ ವಾರ್ ಡ್ರಾಮಾ ‘ಮಾತೃಭೂಮಿ’ ಚಿತ್ರಕ್ಕೆ ಅಡೆತಡೆಗಳ ಸರಮಾಲೆಯೇ ಎದುರಾಗಿದೆ. ಗಲ್ವಾನ್ ಕಣಿವೆಯ ಸಂಘರ್ಷದ ಹಿನ್ನೆಲೆಯಲ್ಲಿ ತಯಾರಾಗಿದ್ದ ಈ ಚಿತ್ರ, ರಾಜತಾಂತ್ರಿಕ ಕಾರಣಗಳಿಂದಾಗಿ ಈಗ ಅತಂತ್ರ ಸ್ಥಿತಿಯಲ್ಲಿದೆ.

ಚೀನಾದ ಆಕ್ಷೇಪಣೆ ಹಾಗೂ ಭಾರತೀಯ ಅಧಿಕಾರಿಗಳ ಮೌಖಿಕ ಸಲಹೆಯ ಮೇರೆಗೆ ಚಿತ್ರದ ಕಥೆ ಮತ್ತು ಶೀರ್ಷಿಕೆಯಲ್ಲಿ ಬದಲಾವಣೆ ಮಾಡಲಾಗಿದ್ದರೂ, ಬಿಡುಗಡೆಯ ಹಾದಿ ಮಾತ್ರ ಇನ್ನೂ ಸುಗಮವಾಗಿಲ್ಲ.

ಗಲ್ವಾನ್ ಕಣಿವೆಯ ನೈಜ ಘಟನೆಗಳನ್ನು ಆಧರಿಸಿ ಚಿತ್ರೀಕರಿಸಲಾಗಿದ್ದ ಈ ಚಿತ್ರಕ್ಕೆ ಆರಂಭದಲ್ಲಿ ಚೀನಾದಿಂದ ವಿರೋಧ ವ್ಯಕ್ತವಾಗಿತ್ತು. ಭಾರತ-ಚೀನಾ ರಾಜತಾಂತ್ರಿಕ ಸಂಬಂಧಗಳ ದೃಷ್ಟಿಯಿಂದ ಚಿತ್ರದ ಮೂಲ ಕಥೆಯಲ್ಲಿದ್ದ ಗಲ್ವಾನ್ ಉಲ್ಲೇಖಗಳನ್ನು ಕೈಬಿಡುವಂತೆ ಅಧಿಕಾರಿಗಳು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ನಿರ್ದೇಶಕ ಅಪೂರ್ವ ಲಾಖಿಯಾ ಚಿತ್ರಕ್ಕೆ ಮರುಜೀವ ನೀಡಲು ಪ್ರಯತ್ನಿಸುತ್ತಿದ್ದು, ಹೆಚ್ಚುವರಿ ದೃಶ್ಯಗಳನ್ನು ಸೇರಿಸಿದ್ದಾರೆ.

ಆದರೆ, ಇನ್ನು ಕೂಡ ಸಿನಿಮಾ ಸೆನ್ಸಾರ್ ಮಂಡಳಿಯ ಮೆಟ್ಟಿಲೇರಿಲ್ಲ. ರಕ್ಷಣಾ ಸಚಿವಾಲಯ ಅಥವಾ ಸೇನಾ ಅಧಿಕಾರಿಗಳ ಅನುಮತಿಗಾಗಿ ಚಿತ್ರತಂಡ ಕಾಯುತ್ತಿದ್ದು, ಕಾನೂನು ಪ್ರಕ್ರಿಯೆಗಳ ಗೊಂದಲದಲ್ಲಿ ಸಿನಿಮಾ ಸಿಲುಕಿಕೊಂಡಿದೆ.

Must Read