August 24, 2026
Monday, August 24, 2026
spot_img

CINE | ಬಾಲಿವುಡ್ ಕ್ಯೂಟ್ ಕಪಲ್ ನಡುವೆ ಸಿನಿ ಸಮರ: ಆಗಸ್ಟ್‌ನಲ್ಲಿ ರಂಗೇರಲಿದೆ ಬಾಕ್ಸ್ ಆಫೀಸ್ ವಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಜನಪ್ರಿಯ ಜೋಡಿ ಕಿಯಾರಾ ಅಡ್ವಾಣಿ ಮತ್ತು ಸಿದ್ದಾರ್ಥ್ ಮಲ್ಹೋತ್ರಾ ಇದೀಗ ಬಾಕ್ಸ್ ಆಫೀಸ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಚರ್ಚೆಗೆ ಗ್ರಾಸವಾಗಿದೆ. ಇಬ್ಬರ ಸಿನಿಮಾಗಳ ಬಿಡುಗಡೆಯ ದಿನಾಂಕಗಳು ಹತ್ತಿರ ಬಂದಿರುವುದು ಸಿನಿಪ್ರಿಯರ ಗಮನ ಸೆಳೆದಿದೆ.

‘ಟಾಕ್ಸಿಕ್’ಗೆ ಬಿಡುಗಡೆಯ ದಿನಾಂಕ ಫಿಕ್ಸ್

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರ ಆಗಸ್ಟ್ 26ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸಿದ್ದಾರ್ಥ್ ಸಿನಿಮಾಗೂ ಅದೇ ವಾರ ಎಂಟ್ರಿ

ಇನ್ನೊಂದೆಡೆ, ಸಿದ್ದಾರ್ಥ್ ಮಲ್ಹೋತ್ರಾ ಅಭಿನಯದ ‘ವನ್’ ಸಿನಿಮಾ ಆಗಸ್ಟ್ 28ರಂದು ತೆರೆಗೆ ಬರುವ ನಿರೀಕ್ಷೆ ಇದೆ. ಹೀಗಾಗಿ ಎರಡು ದಿನಗಳ ಅಂತರದಲ್ಲಿ ಪತಿ-ಪತ್ನಿಯ ಸಿನಿಮಾಗಳು ಬಿಡುಗಡೆಯಾಗುವ ಸಾಧ್ಯತೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು.

ಇದನ್ನೂ ಓದಿ:

ಮುಖಾಮುಖಿ ನಡೆಯೋದು ಅನುಮಾನ?

ಆದರೆ ಬಾಲಿವುಡ್ ವಲಯದಲ್ಲಿ ಕೇಳಿಬರುತ್ತಿರುವ ಮಾಹಿತಿಗಳ ಪ್ರಕಾರ, ‘ವನ್’ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಏಕಾಂಗಿಯಾಗಿ ಅಬ್ಬರಿಸುವ ಅವಕಾಶ

ಒಂದು ವೇಳೆ ಸಿದ್ದಾರ್ಥ್ ಸಿನಿಮಾ ಮುಂದೂಡಿಕೆಯಾದರೆ, ಆಗಸ್ಟ್ ಕೊನೆಯ ವಾರದಲ್ಲಿ ‘ಟಾಕ್ಸಿಕ್’ ಚಿತ್ರಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಏಕಾಂಗಿಯಾಗಿ ಅಬ್ಬರಿಸುವ ಅವಕಾಶ ಸಿಗುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !